ಬೆಂಗಳೂರು : ಇಂಥಹ ಅಕ್ರಮ ಮಾಡೋದರಲ್ಲಿ ಕಾಂಗ್ರೆಸ್ನವರು ಪ್ರವೀಣರು, ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಅಂತಾ ಒತ್ತಾಯ ಮಾಡುತ್ತೇನೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಹೇಳಿದರು.
KPSC ನೇಮಕಾತಿ ಪರೀಕ್ಷೆಯಲ್ಲಿ ಡಿ.ಕೆ.ಶಿ. ಬ್ರದರ್ಸ್ ದೋಖಾ ವಿಚಾರ ಕುರಿತು ನಮ್ಮ ಪವರ್ ಟಿವಿ ವಿಸ್ತಾರ ವರದಿ ಬಿತ್ತರಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪವರ್ ಟಿವಿ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಶ್ವಥ್ ನಾರಾಯಣ್ ಮೇಲೆ ಸುಖಾಸುಮ್ಮನೆ ನಿರಾಧಾರ ಆರೋಪ ಮಾಡಿದ್ದಾರೆ. ಆದರೆ, ನಾನು ನಿನ್ನೆಯಿಂದ ಪವರ್ ಟಿವಿ ನೋಡ್ತಾ ಇದ್ದೀನಿ ಅದರಲ್ಲಿ ಡಿಕೆ ಸುರೇಶ್ ಅವರ ಕರ್ಮಕಾಂಡವನ್ನು ತೋರಿಸುತ್ತಲೇ ಇದ್ದಾರೆ ಎಂದು ತಿಳಿಸಿದರು.
ಕೆಪಿಎಸ್ ಸಿಯಲ್ಲಿ ಡಿಕೆ ಬ್ರದರ್ಸ್ ಅಕ್ರಮ ಆರೋಪದಲ್ಲಿ ಅವರ ತಾಲೂಕಿನ ಅಭ್ಯರ್ಥಿಯಿಂದಲೇ 25 ಲಕ್ಷ ವಸೂಲಿ ಮಾಡಿದ್ದಾರೆ. ಅಲ್ಲದೇ ತಾಯಿ ಮಗ ದುಡ್ಡು ಕೇಳಲು ಹೋದರೆ ಹಿಗ್ಗಾಮುಗ್ಗ ಹೊಡೆದಿದ್ದಾರೆ ಹಾಗೂ ಸಂಧಾನಕಾರರ ಮೂಲಕ ಸೆಟಲ್ಮೆಂಟ್ ಮಾಡಿದ್ದಾರೆ. ಮೊದಲು ನಿಮ್ಮ ತಪ್ಪಿಗಳನ್ನು ನೀವು ಸರಿ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಕಾಂಗ್ರೆಸ್ ಅವಧಿಯಲ್ಲಿ ಪರೀಕ್ಷೆಯಿಲ್ಲದೇ ನೇಮಕಾತಿ ಆಗಿದೆ. ನೀನು ಬೇರೆಯವರನ್ನ ಕುಡುಕ ಅಂತಾ ಹೇಳೋ ಮೊದಲು ನೀನು ಕುಡಿಯಬಾರದು. ನಾನು ತಪ್ಪು ಮಾಡಿ ಇನ್ನೊಬ್ಬರನ್ನ ಕಳ್ಳ ಅನ್ನೋಕ್ಕಾಗುತ್ತ ? ಡಿಕೆ ಸುರೇಶ್ ವರ್ತನೆಯನ್ನ ಯಾರೂ ಒಪ್ಪುವುದಿಲ್ಲ. ಸ್ವತಃ ಸೆಟಲ್ಮೆಂಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷರೇ ಮಾತಾಡಿದ್ದಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ಕಿಡಿಕಾರಿದರು.


