ಬೆಳಗಾವಿ : ಕೆಪಿಎಸ್ಸಿ ನೇಮಕಾತಿಗೆ ಡಿ.ಕೆ ಸುರೇಶ್ 25 ಲಕ್ಷ ಹಣ ಪಡೆದಿರುವ ವಿಚಾರವಾಗಿ ಪವರ್ ಟಿವಿ ಉತ್ತಮ ತನಿಖಾ ವರದಿ ಪ್ರಸಾರ ಮಾಡಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಶಂಶಿಸಿದ್ದಾರೆ.
ಕೆಪಿಎಸ್ಸಿ ನೇಮಕಾತಿಯಲ್ಲಿ ಡಿಕೆ.ಶಿ. ಬ್ರದರ್ಸ್ ದೋಖಾ ವಿಚಾರದ ಕುರಿತು ನಮ್ಮ ಪವರ್ ಟಿವಿ ವಿಸ್ತಾರ ವರದಿ ಬಿತ್ತರಿಸಿತು. ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಕೆಪಿಎಸ್ ಸಿ ಎಲ್ಲಿ ಸಾಕಷ್ಟು ಹಗರಣ ಇದೆ ಎಂದು ನಾನು ಹೇಳಿದ್ದೆ ಈಗ ಪವರ್ ಟಿವಿ ಅದನ್ನು ಬಹಿರಂಗ ಪಡೆಸಿದೆ ಆ ವಾಹಿನಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಅದುವಲ್ಲದೇ, ತಪ್ಪಿತಸ್ಥರು ಯಾರೆ ಇದ್ರು ಅವರಿಗೆ ಶಿಕ್ಷೆ ಯಾಗಬೇಕು. ಅದರಲ್ಲೂ ಡಿ.ಕೆ ಶಿವಕುಮಾರ್ ಕುಟುಂಬದ ಮೇಲೆ ಸಾಕಷ್ಟು ಹಗರಣಗಳು ಇವೆ. ಇದೊಂದು ಬಹಳ ಗಂಭೀರ ಪ್ರಖರಣ ಬಡ ವಿದ್ಯಾರ್ಥಿ ಹತ್ತಿರ 25 ಲಕ್ಷ ಪಡೆದು ಮೋಸ ಮಾಡಿದ್ದಾರೆ. ಮೃತ ಗುತ್ತಿಗೆದಾರ ಸಂತೋಷ ಪಾಟೀಲ್ ಮನೆಗೆ ಹೋಗಿ 25 ಲಕ್ಷ ಹಣ ಕೊಡುತ್ತಾರೆ. ಇನ್ನೊಂದು ಕಡೆ ಬಡ ವಿದ್ಯಾರ್ಥಿ ಕಡೆ 25 ಲಕ್ಷ ಹಣ ಪಡೆಯುತ್ತಾರೆ. ಇದೊಂದು ರಾಜಕೀಯ ಗೀಮಿಕ್ ಗೃಹ ಮಂತ್ರಿಗಳು ಈ ಪ್ರಖರಣ ಗಂಭೀರವಾಗಿ ತೆಗೆದುಕೊಳ್ಳಬೇಕು. ಗೃಹ ಮಂತ್ರಿಗಳ ಬಗ್ಗೆಯೂ ಹಗುರಾವಗಿ ಮಾತನಾಡಿದ್ದಾರೆ ಡಿ.ಕೆ.ಶಿ ಇವರನ್ನು ಹೀಗೆ ಬಿಡಬಾರದು ಗುಂಡಾಗಿರಿ ಸಂಸ್ಕೃತಿಯಿಂದ ಕಾಂಗ್ರೆಸ್ ನಾಯಕರ ಅಂತ್ಯವಾಗಬೇಕು ಎಂದು ಕಿಡಿಕಾಡಿದ್ದಾರೆ.


