ಹುಬ್ಬಳ್ಳಿ : ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಮಾತನಾಡುವಲ್ಲಿ ಡಿಕೆ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಕೆ ಪಿ ಎಸ್ ಸಿ ನೇಮಕಾತಿಯಲ್ಲಿ ಡಿ.ಕೆ.ಶಿ. ಬ್ರದರ್ಸ್ ದೋಖಾ ವಿಚಾರದ ಕುರಿತು ನಮ್ಮ ಪವರ್ ಟಿವಿ ವಿಸ್ತಾರ ವರದಿ ಬಿತ್ತರಿಸಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಡಿ ಕೆ ಸಹೋದರರು ಬ್ರಹ್ಮಾಂಡ ಬ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರು.
ಅದುವಲ್ಲದೇ, ನೌಕರಿ ಮಾಡಿಸುವುದಾಗಿ ಹೇಳಿ ಹಣ ಹೊಡೆದಿದ್ದಾರೆ. ಹಣ ವಾಪಸ್ಸು ಕೇಳಲು ಹೋದವನ ಮೇಲೆ ಹಲ್ಲೆ ಮಾಡಿದ್ದಾರೆ. ರಾಜ್ಯ ಸರ್ಕಾರ ಡಿಕೆ ಸಹೋದರರ ಮೇಲೆ ಕ್ರಮ ಕೈಗೊಳ್ಳಬೇಕು. ಗ್ರಹಮಂತ್ರಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. ಪಿ ಎಸ್ ಐ ನೇಮಕಾತಿಯಲ್ಲಿ ಆಕ್ರಮದ ಬಗ್ಗೆ ಮಾತನಾಡುವ ಡಿ ಕೆ ನೈತಿಕತೆ ಕಳೆದುಕೊಂಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬಂದಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹುಬ್ಬಳ್ಳಿಯಲ್ಲಿ ಮಹೇಶ ಟೆಂಗಿನಕಾಯಿ ಹೇಳಿದರು.


