KPSC SCAM; ಡಿಕೆ ಬ್ರದರ್ಸ್ ರೌಡಿಸಂನಲ್ಲೇ ಬೆಳೆದು ಬಂದವರು: ಯಶವಂತರಾವ್ ಜಾದವ್

ದಾವಣಗೆರೆ : ಡಿಕೆ ಬ್ರದರ್ಸ್ ರೌಡಿಸಂನಲ್ಲೇ ಬೆಳೆದು ಬಂದವರು,ಅವರು ಇನ್ನೇನು ಮಾಡೋಕೆ‌ ಸಾಧ್ಯ ಎಂದು ದಾವಣಗೆರೆಯಲ್ಲಿ ಬಿಜೆಪಿ‌ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಡಿಕೆ ಸಹೋದರರ ವಿರುದ್ಧ ಕಿಡಿಕಾರಿದರು.

KPSC ನೇಮಕಾತಿ ಪರೀಕ್ಷೆಯಲ್ಲಿ ಡಿ.ಕೆ.ಶಿ. ಬ್ರದರ್ಸ್ ದೋಖಾ ವಿಚಾರ ಕುರಿತು ನಮ್ಮ ಪವರ್​ ಟಿವಿ ವಿಸ್ತಾರ ವರದಿ ಬಿತ್ತರಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿಕೆ ಬ್ರದರ್ಸ್ ರೌಡಿಸಂನಲ್ಲೇ ಬೆಳೆದು ಬಂದವರು,ಅವರು ಇನ್ನೇನು ಮಾಡೋಕೆ‌ ಸಾಧ್ಯ. ಎಲ್ಲರೂ ಕಾಂಗ್ರೆಸ್​​ನ ಬ್ರದರ್ಸ್​​​ನ ಕರ್ಮಕಾಂಡವನ್ನು ಒಮ್ಮೆ ತಿರುಗಿ ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಇವರು ನಿಮ್ಮನ್ನು ನೋಡಿಕೊಳ್ಳುತ್ತೇವೆಂದು ದಮ್ಕಿ ಹಾಕುತ್ತಲೇ ಎಲ್ಲರನ್ನು ಎದರಿಸುತ್ತಾರೆ. ಇವರ ವಿರುದ್ದ ಮಾತನಾಡಿದವರ ಮೇಲೆ ಕುತಂತ್ರ ಮಾಡುತ್ತಾರೆ. ಈಗ ಹಣ ವಾಪಾಸ್ ಕೇಳಲು ಹೋದವರಿಗೆ ಹೊಡೆದು ಕಳುಹಿಸಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇದ್ದರೆ ನೈತಿಕ ಹೊಣೆ ಹೊತ್ತು ಡಿಕೆಶಿ ಬ್ರದರ್ಸ್ ರಾಜೀನಾಮೆ ನೀಡಬೇಕು ಹಾಗೂ ಇವರ ವಿರುದ್ಧ ತನಿಖೆಯಾಗಬೇಕು ಎಂದಿದ್ದಾರೆ.

ಅದುವಲ್ಲದೇ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷ ಯಾವುದೇ ಇರಲಿ ಪವರ್ ಟಿವಿ ನೈಜ್ಯ ಸುದ್ದಿ ಕೊಡುತ್ತಿದೆ. ಹೀಗಾಗಿ ಜನರ ಪರವಾಗಿ ಕೆಲಸ ಮಾಡುವ ಪವರ್ ಟಿವಿಯವರಿಗೆ ಧನ್ಯವಾದಗಳು ಎಂದು ಹೇಳಿದರು.

RELATED ARTICLES

Related Articles

TRENDING ARTICLES