ಆಜಾನ್​ಗೆ ಶ್ರೀರಾಮ ಸೇನೆ ಖಂಡನೆ

ಗದಗ: ಜಿಲ್ಲೆಯಲ್ಲಿ ಮೈಕ್ ಬ್ಯಾನ್ ನ ಧರ್ಮ ಧಂಗಲ್ ಜೋರಾಗಲಿದೆ. ಬರುವ ದಿನಾಂಕ 9 ರ ಒಳಗಾಗಿ ಮಸೀದಿ ಮೇಲಿನ ಮೈಕ್ ಗಳ ತೆರವಿಗಾಗಿ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರಿಗೆ ಆಗ್ರಹಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸೀದಿ ಮೇಲಿನ ಮೈಕ್ ತೆರವಿಗೆ ಸರ್ಕಾರ, ಅಧಿಕಾರಿಗಳಿಗೆ ಸಂಘಟಿಕರು ಆಗ್ರಹಿಸಿದರು. ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲೂ ಹಿಂದೂ ಸಂಘಟನೆಗಳಿಂದ ಮೈಕ್ ಬ್ಯಾನ್ ಕ್ಯಾಂಪೇನ್ ಶುರುವಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ‌ ಮಾಡಬೇಕು ಎಂದರು.

ಅದುವಲ್ಲದೇ, ಅನಧಿಕೃತ ಮೈಕ್ ಗಳ ತೆರವುಗೊಳಿಸಬೇಕು. ಶಬ್ಧ ಮಾಲಿನ್ಯ ನಿಯಂತ್ರಿಸಬೇಕು. ಅನಧಿಕೃತ ಮೈಕ್ ಅಳವಡಿಸಿ, ಕೋರ್ಟ್ ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದ್ರೆ ಬರುವ 9 ರ ಒಳಗಾಗಿ ಮೈಕ್ ತೆರವುಗೊಳಿಸದಿದ್ರೆ ಪ್ರತಿದಿನ ನಮಾಜ್ ವೇಳೆ ಹಿಂದೂ ಸಂಘಟನೆಗಳಿಂದ ಜಿಲ್ಲೆಯ ಎಲ್ಲಾ ದೇವಸ್ಥಾನ, ಮಠ, ಮಂದಿರಗಳಲ್ಲಿ ಮೈಕ್ ಹಚ್ಚಲಾಗುತ್ತೆ. ಹನುಮಾನ್ ಛಾಲಿಸ್, ಗಾಯತ್ರಿ ಮಂತ್ರ, ಶ್ರೀರಾಮ, ಕೃಷ್ಣನ ಭಜನೆ ಪದಗಳನ್ನು ಹಾಕುವುದಾಗಿ ಹೇಳಿದರು.

RELATED ARTICLES

Related Articles

TRENDING ARTICLES