ಕಾಂಗ್ರೆಸ್​​ನವರ ಕಾಲದಲ್ಲೂ ಪರೀಕ್ಷೆಗಳಲ್ಲಿ ಅಕ್ರಮ : ಸಿ ಎಂ ಬೊಮ್ಮಾಯಿ

ಬೆಂಗಳೂರು : ಕಾಂಗ್ರೆಸ್​​ನವರ ಕಾಲದಲ್ಲೂ ಹಲವು ಪರೀಕ್ಷೆಗಳಲ್ಲಿ ಅಕ್ರಮಗಳಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2 ಲಕ್ಷ ಟನ್ ಹೆಚ್ಚುವರಿ ರಾಗಿ ಖರೀದಿಗೆ ನಾಳೆಯಿಂದಲೇ ನೋಂದಣಿಗೆ ಚಾಲನೆ ಸಿಗಲಿದೆ ಎಂದರು.

ಇನ್ನು ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ತನಿಖೆ ಪಾರದರ್ಶಕವಾಗಿ ನಡೀತಿದೆ. ಯಾರ ಬಳಿ ಏನೇ ಆಧಾರ, ಸಾಕ್ಷಿ ಇದ್ದರೂ ತಂದು ಕೊಡಲಿ ನಾವು ಪರಿಶೀಲನೆ ಮಾಡುತ್ತೇವೆ. ಅಲ್ಲದೇ ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್​​ನವರು ಸಾಕ್ಷ್ಯ, ಆಧಾರ ಇಲ್ಲದೇ ರಹಿತ ಹಿಟ್ ಅಂಡ್ ರನ್ ಆರೋಪ ಮಾಡುತ್ತಿದ್ದಾರೆ ಎಂದರು.

ಅದುವಲ್ಲದೇ ಅವರ ಆಧಾರ ರಹಿತ ಆರೋಪಕ್ಕೆ ಜನ ಮನ್ನಣೆ ಕೊಡಲ್ಲ. ಅಲ್ಲದೇ ಅವರ ಕಾಲದಲ್ಲಿ ಆದಂತಹ ಹಲವು ಪರೀಕ್ಷೆಗಳಲ್ಲಿ ಅಕ್ರಮಗಳಾಗಿವೆ.ಆದ್ದರಿಂದ ತಾವು ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಭಯದಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ರಾಜಕೀಯ ಕಾರಣಕ್ಕಾಗಿ ಇದೊಂದು ದೊಡ್ಡ ಸುದ್ದಿ ಅಂತ ಬಿಂಬಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು.

RELATED ARTICLES

Related Articles

TRENDING ARTICLES