2022-23ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಯುವಕರು, ಮಧ್ಯಮ ವರ್ಗ, ಬಡವರ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ.
ಆಯವ್ಯಯದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿವೆ. ಇದೊಂದು ಉತ್ತಮವಾದ ಬಜೆಟ್ ಆಗಿದೆ ಎಂದರು. ವಿಶ್ವವೇ ಸೋಂಕಿನಿಂದ ಕಂಗಾಲಾಗಿದೆ. ಇದರ ಮಧ್ಯೆಯೂ ಆರ್ಥಿಕ ಪುನಶ್ಚೇತನ ಆಶಾದಾಯಕವಾಗಿದೆ. ನಾವು ಆಧುನಿಕ ಭಾರತವನ್ನು ನಿರ್ಮಾಣ ಮಾಡಬೇಕಿದೆ. ಅಷ್ಟೆ ಅಲ್ಲದೆ ಬಜೆಟ್ನ ಸಂಪೂರ್ಣ ವಿವರಣೆ ಮಾಡುವುದು ಕಷ್ಟ ಸಾಧ್ಯ ಎಂದ ಮೋದಿಯವರು, ಬಜೆಟ್ನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿವೆ. ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಬಜೆಟ್ ಅನ್ನು ಪ್ರಶಂಸಿಸಿದ್ದಾರೆ.


