ಸಿ.ಎಂ. ಬಸವರಾಜ ಬೊಮ್ಮಾಯಿ ಅವರ ಶಿಷ್ಯ ಕಾಂಗ್ರೆಸ್ ಸೇರ್ಪಡೆಯಾದ್ರ?

ಹಾವೇರಿ : ಬೆಂಗಳೂರಿನ ಡಿಕೆ.ಶಿವಕುಮಾರ್ ಮನೆಗೆ ಧಾರವಾಡ ಮಾಜಿ ಸಚಿವ ವಿನಯ್ ಕುಲಕರ್ಣಿ ಜೊತೆ ಭೇಟಿ ನೀಡಿ ಹೊಸ ವರ್ಷದ ಶುಭಾಶಯವನ್ನು ಮಲ್ಲಿಕಾರ್ಜುನ ಹಾವೇರಿ ಕೋರಿದ್ದಾರೆ.

ಮಲ್ಲಿಕಾರ್ಜುನ ಹಾವೇರಿ ಇತ್ತಿಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ ಅವರು, ಹಾವೇರಿ ಜಿಲ್ಲೆಯ ಎಪಿಎಂಸಿಯ ಅಧ್ಯಕ್ಷರಾಗಿದ್ದರು.

ಚುನಾವಣೆಯಲ್ಲಿ ಪಕ್ಷ ವಿರೋಧಿ ಚುಟುವಟಿಕೆ ಮಾಡಿದ್ದರೆಂದು ಬಿಜೆಪಿ ಸದಸ್ಯತ್ವದಿಂದ ಮೊನ್ನೆ ೫ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು. ಈಗ ಧಾರವಾಡದ ಮಾಜಿ ಸಚಿವ ವಿನಯ್ ಕುಲಕರ್ಣಿ ಜೊತೆ ಮಲ್ಲಿಕಾರ್ಜುನ ಹಾವೇರಿ ಅವರು ಡಿಕೆ ಶಿವಕುಮಾರ್​ ಅವರ ಮನೆಗೆ ಹೋಗಿ ಹೊಸ ವರ್ಷದ ಶುಭಾಷಯವನ್ನು ಕೋರಿದ್ದಾರೆ, ಹಾಗು ಆ ಸಮಯದಲ್ಲಿ ತೆಗೆದಿಸಿಕೊಂಡಿರುವ ಪೋಟೋಗಳನ್ನ ವಿನಯ್ ಕುಲಕರ್ಣಿ ಅವರು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಟೋಗಳು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.

ಸಿ.ಎಂ. ಬಸವರಾಜ ಬೊಮ್ಮಾಯಿ ಅವರ ಶಿಷ್ಯರಾಗಿದ್ದ ಮಲ್ಲಿಕಾರ್ಜುನ ಹಾವೇರಿ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ್ರಾ? ಎಂಬ ಅನುಮಾನವನ್ನು ಹುಟ್ಟು ಹಾಕ್ತಿವೆ.

RELATED ARTICLES

Related Articles

TRENDING ARTICLES