ವಿಶ್ವ ವಿಖ್ಯಾತ ಗೋಳಗುಮ್ಮಟ ವೀಕ್ಷಣೆಗೆ ಹೆಚ್ಚಾದ ಪ್ರವಾಸಿಗರು

ವಿಜಯಪುರ : ಹೊಸ ವರ್ಷ ಮತ್ತು ವಿಕೇಂಡ್ ಹಿನ್ನಲೆ ಪ್ರಯುಕ್ತ ವಿಶ್ವ ವಿಖ್ಯಾತ ಗೋಳಗುಮ್ಮಟ ವೀಕ್ಷಣೆಗೆ ಹೆಚ್ಚಾದ ಪ್ರವಾಸಿಗರು.

ಹೊಸ ವರ್ಷಾಚರಣೆಗೆ ಜನರು ಯಾವುದಾದರೂ ಪ್ರವಾಸಿ ತಾಣಕ್ಕೇ ಭೇಟಿ ಕೊಟ್ಟು ವರ್ಷದ ಮೊದಲ ದಿನವನ್ನು ಖುಷಿಯಿಂದ ಬರಮಾಡಿಕೊಳ್ಳಬೇಕೆಂದು ಸಾಕಷ್ಟು ಯೋಜನೆಯನ್ನು ಮಾಡಿರುತ್ತಾರೆ. ಆದರೆ ದುರಾದೃಷ್ಟವಶಾತ್​ ಒಮೈಕ್ರಾನ್​ ಭೀತಿ ಹಿನ್ನಲೆ ಸರ್ಕಾರವು ನೈಟ್​ ಕರ್ಫ್ಯೂವನ್ನು ಜಾರಿಗೆ ತಂದಿತು .

ಇದರ ಮಧ್ಯೆಯು ವಿಜಯಪುರದ ಗೋಳಗುಮ್ಮಟ ವೀಕ್ಷಣೆಗೆ ಪ್ರವಾಸಿಗರ ದಂಡು ಆಗಮಿಸಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿ ಗೋಳಗುಮ್ಮಟವನ್ನು ನೆಚ್ಚಿನ ಕುಟುಂಬದ ಜೊತೆ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ . ಇಷ್ಟು ದಿವಸ ಕೋವಿಡ್​ ಮತ್ತು ಒಮೈಕ್ರಾನ್​ ಹಿನ್ನಲೇ ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿದ್ದ ಗೋಳಗುಮ್ಮಟದ ಆವರಣದಲ್ಲಿಂದು ಪ್ರವಾಸಿಗರ ಆಗಮನವಾಗಿದ್ದರಿಂದ, ವ್ಯಾಪಾರಿಗಳು ಸಂತಸಗೊಂಡಿದ್ದಾರೆ. ಹಾಗೂ ಗೋಳಗುಮ್ಮಟದ ಸಿಬ್ಬಂದಿಗಳು ಮಾಸ್ಕ್ ಇದ್ದವರಿಗೆ ಮಾತ್ರ ಗೋಳಗುಮ್ಮಟ ಆವರಣಕ್ಕೆ ಪ್ರವೇಶ ನೀಡುತ್ತಿದ್ದಾರೆ.

RELATED ARTICLES

Related Articles

TRENDING ARTICLES