ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ. ಮೂವರು ವೆಂಕಟೇಶ್ ಎಂಬುವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ.
ಕಳವು ಮಾಲು ಸ್ವೀಕರಿಸಿದ್ದೀರಾ ಎಂದು ಬೆದರಿಸಿ ದರೋಡೆ ಮಾಡಿದ್ದಾರೆ. ತಿಪಟೂರು ಪೊಲೀಸರು ಎಂದು ಹೇಳಿ ಹಣ, ಆಭರಣ ವಶಕ್ಕೆ ಪಡೆದಿದ್ದಾರೆ. ಸುಮಾರು 600 ಗ್ರಾಂ ಆಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ನಿನ್ನೆ ಸಂಜೆ ಮೂವರು ವೆಂಕಟೇಶ್ ಮನೆಗೆ ಬಂದಿದ್ದರು. ಇಬ್ಬರು ಪೊಲೀಸರ ಸೋಗಿನಲ್ಲಿ ಬಂದು ಓರ್ವ ಕಳ್ಳನೆಂದು ಕರೆತಂದಿದ್ದಾಗಿ ಹೇಳಿದ್ದರು.
ಕಳ್ಳತನದ ಮಾಲು ತಮಗೆ ಕೊಟ್ಟಿದ್ದಾನೆಂದು ಹೇಳಿಕೊಂಡು ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡಿದ್ದಾರೆ. ಈ ಸಂಬಂಧ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದು, ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


