ಇನ್ನು ಮುಂದೆ ದುನಿಯಾ ಸಿಕ್ಕಾಪಟ್ಟೆ ಕಾಸ್ಲಿ

ಬೆಂಗಳೂರು : ಹೊಸ ವರ್ಷಕ್ಕೆ ಜನರಿಗೆ ಬಿಗ್ ಶಾಕ್‌ನ್ನು ನೀಡಲಾಗಿದೆ. ಕೊರೋನಾ ನಡುವೆ ಕಂಗೆಟ್ಟಿರುವ ಜನಸಾಮಾನ್ಯರಿಗೆ ದುಬಾರಿ ಬರೆ ಎಳೆದಂತಾಗಿದೆ. ಇನ್ನು ಮುಂದೆ ಮನೆಯ ಸಾಮಾಗ್ರಿಗಳ ಬೆಲೆ ತುಂಬಾ ದುಬಾರಿಯಾಗಲಿದೆ.

ಇಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ವಸ್ತುಗಳ ಬೆಲೆ ಏರಿಕೆ ಕಂಡುಬಂದಿದ್ದು ಎಲೆಕ್ಟ್ರಾನಿಕ್ ವಸ್ತುಗಳಾದ ರೆಫ್ರಿಜರೇಟರ್‌, ವಾಷಿಂಗ್‌ಮಶಿನ್‌, ಎ.ಸಿ, ಬೆಲೆಯಲ್ಲಿ ಭಾರಿ ಏರಿಳಿತವಾಗಿದೆ. ಶೇ.4ರಿಂದ ಗರಿಷ್ಠ ಶೇ.10ರವರೆಗೂ ಏರಿಕೆಯಾಗುವ ಸುಳಿವು ಈಗಾಗಲೇ ಎಲ್ಲೆಡೆ ಹರಡಿದೆ. ಓಲಾ, ಊಬರ್‌ಆಟೋ, ಟ್ಯಾಕ್ಸಿ ಪ್ರಯಾಣದಲ್ಲಿಯೂ ಕೂಡ ಬೆಲೆ ಏರಿಕೆ ಕಂಡುಬಂದಿದೆ.

ಆ್ಯಪ್‌ಗಳ ಮೂಲಕ ಪ್ರಯಾಣಕ್ಕೆ ಬುಕ್‌ಮಾಡಿದರೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಸ್ವಿಗ್ಗಿ, ಝೊಮ್ಯಾಟೋ ಫುಡ್‌ ಪಾರ್ಸಲ್‌,ತಿಂಡಿ-ತಿನಿಸು ಪೂರೈಕೆ ಸೇವೆಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿದ್ದಾರೆ. ಅಲ್ಲದೇ ಎಟಿಎಂ ವಿತ್‌ಡ್ರಾ ಶುಲ್ಕದಲ್ಲಿಯೂ ಹೆಚ್ಚಳವಾಗಿದ್ದು, ದಿನಬಳಕೆ ವಸ್ತುಗಳಾದ ಸೋಪ್‌, ಎಣ್ಣೆ, ಟೂತ್‌ಪೇಸ್ಟ್‌, ಹಾಲು, ಹಣ್ಣು, ತರಕಾರಿ, ಕಾಫಿ, ಟೀ, ತಂಪು ಪಾನೀಯಗಳ ಬೆಲೆ ಏರಿಕೆಯಾಗಿದೆ. 2-3 ತಿಂಗಳಲ್ಲಿ ಮತ್ತೆ ಶೇ.4-10ರಷ್ಟು ಏರಿಕೆಯಾಗಲಿದೆಗಳ ಬೆಲೆ ಹೆಚ್ಚಳ ಕಂಡುಬಂದಿದೆ.

RELATED ARTICLES

Related Articles

TRENDING ARTICLES