ರಾಯಚೂರು : ಶಾಲೆಯೆಂದರೆ ವಿದ್ಯಾದೇಗುಲವೆಂದು ಎಲ್ಲರೂ ಹೇಳತ್ತಾರೆ, ಆದರೆ ಜ್ಞಾನ ದೇಗುಲದಲ್ಲಿ ಹೊಸ ವರ್ಷದ ನಿಮಿತ್ತ ಗುಂಡು-ತುಂಡು ಪಾರ್ಟಿ ನಡೆದಿದೆ.
ರಾಯಚೂರಿನ ರಬ್ಬಣಕಲ್ ಕ್ಯಾಂಪ್ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಾಸ್ ರೂಮಿನ ಬೀಗ ಮುರಿದು, ದಾಖಲಾತಿಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೇ , ಅಡುಗೆ ಕೋಣೆಯಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ, ಅಡುಗೆಗೆ ಬಳಸುವ ಎಣ್ಣೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿರುವ ದುರ್ಘಟನೆ ನಡೆದಿದೆ.

ಮಕ್ಕಳ ಆಹಾರ ಪರಿಕರಗಳನ್ನು ಬಿಡದೆ ದುಷ್ಕರ್ಮಿಗಳು ಕದ್ದು ಹೋಗಿದ್ದಾರೆ. ಹಾಗೂ ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪ್ಯಾಕೇಟ್ ಇಟ್ಟು ವಿಕೃತಿ ಆಟವನ್ನು ಮೆರೆದಿದ್ದಾರೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್ಗಳು, ಮಾಂಸದ ತುಂಡುಗಳು ಕಂಡುಬಂದಿದ್ದವು.ಇದನೆಲ್ಲಾ ಬೆಳ್ಳಿಗೆ ಶಾಲೆಗೆ ಬಂದ ಶಾಲಾ ಮುಖ್ಯೋಪಾಧ್ಯಯರಾದ ಮಾನ್ವಿ ಅವರು ಗಮಿನಿಸಿ, ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.


