ಬೆಂಗಳೂರು: ‘ಬಿಪಿನ್ ರಾವತ್ ಮೋದಿ ಗುಲಾಮತನದ ಒಂದು ತಲಮಾರು’ ‘ಚೈನಾ ದೇಶ ಭಾರತ ಗಡಿಯಲ್ಲಿ ಬಂದು ಹಳ್ಳಿಗಳನ್ನ ನಿರ್ಮಿಸಿದಾಗ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ’ ‘ರಾವತ್ ಸಾವಿನಿಂದ ದೇಶವಂತೂಪಾರಾಗಿದೆ’ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿ ಇಂದು ಪೊಲೀಸರ ಅತಿಥಿಯಾಗಿದ್ದಾನೆ. CDS ಬಿಪಿನ್ ರಾವತ್ ಸಾವಿನ ಬಗ್ಗೆ ಆಕ್ಷೇಪಾರ್ಹ ಫೇಸ್ ಬುಕ್ ಪೊಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಯನ್ನು ಬೆಂಗಳೂರಿನ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ನಮ್ಮ ಸಂವಿಧಾನದಲ್ಲಿ ಕೊಟ್ಟಿರುವ ವಾಕ್ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ರಾವತ್ ವಿರುದ್ಧ ಹೇಳಿಕೆ ಕೊಡುವ ಮೂಲಕ ಚಲಾಯಿಸಲು ಹೋಗಿರುವ ವ್ಯಕ್ತಿಯನ್ನು ಪೊಲೀಸರು IPC 505 ಅಡಿಯಲ್ಲಿ FIR ದಾಖಲಿಸಿ ಬಂಧಿಸಿದ್ದಾರೆ. ವಸಂತ್ ಕುಮಾರ್ ಟಿಕೆ(40) ಎಂಬ ವ್ಯಕ್ತಿ ವಿರುದ್ದ FIR ದಾಖಲಿಸಿ ಬಂಧಿಸಿದ ವಿಧಾನಸೌಧ ಪೊಲೀಸರು ಇದೀಗ ಅದೇ ಸಂವಿಧಾನದ ಕಾನೂನಿನ ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೈಸೂರು ಮೂಲದ ವಸಂತ್ ಕುಮಾರ್ TK , ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ . ಖಾಸಗಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿದ್ದ ವಸಂತ್ ಕುಮಾರ್ .
ಕಮಿಷನರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ PSI ವಸಂತ್ ಕುಮಾರ್ ಬಗ್ಗೆ ನೀಡಿರುವ ದೂರಿನ ಆಧಾರದ ಮೇಲೆ ವಿಧಾನಸೌಧ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಸಂತಕುಮಾರ್ ಕಮಿಷನರ್ ಕಚೇರಿ ಸೋಷಿಯಲ್ ಮಿಡಿಯಾ ವಿಂಗ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆರೋಪಿಯನ್ನ ಬಂಧಿಸಿ 39 ACMM ನ್ಯಾಯಾಲಯಕ್ಕೆ ವಿಧಾನಸೌಧ ಪೊಲೀಸರು ಹಾಜರುಪಡಿಸಿದ್ದಾರೆ. ಆರೋಪಿ ವಸಂತ್ ಕುಮಾರ್ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.


