ವಿಧಾನಪರಿಷತ್ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ನವೆಂಬರ್ 16ರಂದು ಮೇಲ್ಮನೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 10 ರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.
ಈಗಾಗಲೇ ಅಭ್ಯರ್ಥಿ ಆಯ್ಕೆ ಕಸರತ್ತು ಆರಂಭಗೊಂಡಿದ್ದು ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಹಲವು ಆಕಾಂಕ್ಷಿಗಳು ವರಿಷ್ಠರ ಬಳಿ ಲಾಭಿ ನಡೆಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಲ್ಲಿ ಕೆಲವು ಹಾಲಿ ವಿಧಾನ ಪರಿಷತ್ ಸದಸ್ಯರು ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ 25 ಕ್ಷೇತ್ರಗಳಿಗೆ ಇರುವ ಅಭ್ಯರ್ಥಿ ಆಕಾಂಕ್ಷಿಗಳು ಯಾರು?
• ವಿಜಯಪುರ – ಎಸ್.ಆರ್. ಪಾಟೀಲ್/ ಸುನೀಲ್ ಗೌಡ ಪಾಟೀಲ್
• ದಕ್ಷಿಣ ಕನ್ನಡ (ದ್ವಿಸದಸ್ಯ ಕ್ಷೇತ್ರ) – ಮಂಜುನಾಥ್ ಬಂಡಾರಿ/ ಐವನ್ ಡಿಸೋಜಾ, ಪಿ.ವಿ ಮೋಹನ್
• ಧಾರವಾಡ – ಸಲೀಂ ಅಹ್ಮದ್
• ಚಿಕ್ಕಮಗಳೂರು- ಗಾಯತ್ರಿ ಸಂತೇಗೌಡ
• ಬಳ್ಳಾರಿ- ಕೆ.ಸಿ ಕೊಂಡಯ್ಯ/ ಅನಿಲ್ ಲಾಡ್
• ಮಂಡ್ಯ- ರಾಮಕೃಷ್ಣ
• ಮೈಸೂರು- ಧರ್ಮಸೇನಾ
• ಕೋಲಾರ- ವಿ.ಆರ್ ಸುದರ್ಶನ್
• ತುಮಕೂರು- ರಾಜೇಂದ್ರ
• ಉತ್ತರ ಕನ್ನಡ – ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್
• ಮೈಸೂರು- ಧರ್ಮಸೇನ
• ಬೀದರ್- ವಿಜಯ್ ಸಿಂಗ್
• ರಾಯಚೂರು -ಬಸವರಾಜ್ ಪಾಟೀಲ್ ಇಟಗಿ
• ಶಿವಮೊಗ್ಗ- ಆರ್.ಪ್ರಸನ್ನಕುಮಾರ್
• ಹಾಸನ- ಗೋಪಾಲಸ್ವಾಮಿ (ಹಾಲಿ ಸದಸ್ಯರು ಸ್ಪರ್ಧೆಗೆ ಹಿಂದೇಟು)
• ಬೆAಗಳೂರು- ಎಂ.ನಾರಾಯಣಸ್ವಾಮಿ (ಹಾಲಿ ಸದಸ್ಯರಿಂದ ಸ್ಪರ್ಧಿಸಲು ನಿರಾಕರಣೆ)
• ಬೆಂಗಳೂರು ಗ್ರಾಮಾಂತರ – ಎಸ್.ರವಿ
• ಚಿತ್ರದುರ್ಗ- ರಘು ಆಚಾರ್/ ಎಚ್. ಅಂಜನೇಯ
• ಬೆಳಗಾವಿ (ದ್ವಿಸದಸ್ಯ ಕ್ಷೇತ್ರ) – ಪ್ರಕಾಶ್ ಹುಕ್ಕೇರಿ/ ವಿವೇಕ್ ರಾವ್ ಪಾಟೀಲ್
ನವೆಂಬರ್ 18 ಅಥವಾ 19ಕ್ಕೆ ಅಭ್ಯರ್ಥಿಗಳ ಹೆಸರುಗಳನ್ನ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಅಂತಿಮಗೊಂಡ ಹೆಸರನ್ನು ದೆಹಲಿಗೆ ಕಳುಹಿಸಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಪ್ರಕಟ ಮಾಡಲಿದೆ.


