Thursday, September 18, 2025
HomeUncategorizedಬಿಜೆಪಿ ಜೊತೆ ಒಪ್ಪಂದ - ಯೂಟರ್ನ್ ಹೊಡೆದ ಸಿಬಲ್..!

ಬಿಜೆಪಿ ಜೊತೆ ಒಪ್ಪಂದ – ಯೂಟರ್ನ್ ಹೊಡೆದ ಸಿಬಲ್..!

ನವದೆಹಲಿ : ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸುವ ವಿಚಾರದಲ್ಲಿ ನಡೆ ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಅಸಮಾಧಾನ ಬುಗಿಲೆದ್ದಿತ್ತು.  ಕಾಂಗ್ರೆಸ್ ನಾಯಕತ್ವದ ಬಗ್ಗೆ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಫುಲ್ ಗರಂ ಆಗಿದ್ದಾರೆ ಎಂದು ಹೇಳಲಾಗಿತ್ತು. ಅದರ ಬೆನ್ನಲ್ಲೇ ಟ್ವೀಟ್ ಮೂಲಕ ಹಿರಿಯ ನಾಯಕ ಕಪಿಲ್ ಸಿಬಲ್ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಾವು ಬಿಜೆಪಿಯೊಂದಿಗೆ  ಒಪ್ಪಂದ ಮಾಡಿಕೊಂಡಿದ್ದೇವೆ ಅಂತ ರಾಹುಲ್ ಗಾಂಧಿ ಹೇಳುತ್ತಾರೆ.  ಆದ್ರೆ, ನಾವು ಕಳೆದ 30 ವರ್ಷಗಳಲ್ಲಿ ಯಾವ್ದೇ ವಿಷಯದಲ್ಲಿ ಬಿಜೆಪಿ ಪರ ಹೇಳಿಕೆ ನೀಡಿಲ್ಲ. ರಾಜಸ್ಥಾನ ಹೈಕೋರ್ಟಲ್ಲಿ ಕಾಂಗ್ರೆಸ್​​ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಿ ಮಣಿಪುರದಲ್ಲಿ ಹಾಲಿ ಪಕ್ಷವನ್ನು ನೆರವಾದೆ. ಆದ್ರೂ ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ಗರಂ ಆಗಿ ಟ್ವೀಟ್ ಮಾಡಿದ್ರು.

ಇದೀಗ ಯೂಟರ್ನ್ ಹೊಡೆದಿರುವ ಅವರು ರಾಹುಲ್ ಗಾಂಧಿ ನನ್ನ ಜೊತೆ ಮಾತನಾಡಿ ನಿಮ್ಮನ್ನು ಉದ್ದೇಶಿ ಹೇಳಿಲ್ಲ ಅಂತ ಹೇಳಿದರು. ಹಾಗಾಗಿ ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಅಂತ ಕಪಿಲ್  ಟ್ವೀಟ್ ಡಿಲೀಟ್ ಮಾಡಿದ್ದಾರೆ..!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments