Thursday, August 21, 2025
Google search engine
HomeASTROLOGYಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಸಪ್ಪೆ ಆಗಿರುವ ಸ್ಯಾಂಡಲ್‌ವುಡ್‌ಗೆ ಮೈಲೇಜ್ ಕೊಡಲು ಬರ್ತಿದೆ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ. ದಿಗಂತ್ ನಟನೆಯ ಸಮರ್ಥ್ ಕಡ್ಕೊಳ್ ಚೊಚ್ಚಲ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಅನೇಕ ಕಾರಣಗಳಿಂದ ರಿಲೀಸ್ ಮುಂದಕ್ಕೆ ಹೋಗುತ್ತಿತ್ತು. ಕೊನೆಗೂ ಸಿನಿಮಾ ಸಿನಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಜೂನ್ 13ಕ್ಕೆ ಎಡಗೈಯೇ ಅಪಘಾತಕ್ಕೆ ಕಾರಣ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಇದನ್ನೂ ಓದಿ :ನ್ಯಾಯಾಲಯದ ಆದೇಶ ಪಾಲಿಸಿ ಮತ್ತೆ ಜೈಲಿಗೆ ಹೋಗುತ್ತೇನೆ; ವಿನಯ್​ ಕುಲಕರ್ಣಿ

ಸದ್ಯ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ವಿಶ್ ಮಾಡಿದ್ದಾರೆ. ಈಗಾಗಲೇ ಸಿನಿಮಾದಿಂದ ಬಂದಿರುವ ಟೀಸರ್ ಮತ್ತು ಪೋಸ್ಟರ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿತ್ತು. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಕುತೂಹಲವನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.

ಟೈಟಲ್ ಹೇಳುವ ಹಾಗೆ ಎಡಗೈ ಹೆಚ್ಚಾಗಿ ಬಳಸುವ ವ್ಯಕ್ತಿಗಳ ಕಷ್ಟದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಡಾರ್ಕ್ ಕಾಮಿಡಿ ಮೂಲಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಮರ್ಥ್. ಈ ಸಿನಿಮಾದಲ್ಲಿ ದಿಗಂತ್ ಜೊತೆ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಇಬ್ಬರೂ ನಟಿಯರು ಮಿಂಚಿದ್ದಾರೆ. ಪಂಚರಂಗಿ ಸೂಪರ್ ಹಿಟ್ ಸಿನಿಮಾದ ಬಳಿಕ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ದಿಗಂತ್‌ಗೆ ಜೋಡಿ ಯಾರು ಎನ್ನುವುದು ಕೂಡ ಕುತೂಹಲ ಮೂಡಿಸಿದೆ. ಇದನ್ನೂ ಓದಿ :ಬ್ಲಾಕ್​ಮೇಲ್​ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಮೂವರಿಂದ ಅತ್ಯಾಚಾರ

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಬ್ಲಿಂಕ್ ಮತ್ತು ಶಾಖಹಾರಿ ಸಿನಿಮಾದ ನಿರ್ಮಾಪಕರು ಕೈ ಜೋಡಿಸಿದ್ದಾರೆ. ಇಬ್ಬರು ಒಟ್ಟಿಗೆ ಸೇರಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಶಾಖಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಮತ್ತು ಬ್ಲಿಂಕ್ ನಿರ್ಮಾಪಕ ರವಿಚಂದ್ರ ಅವರು ಸಿನಿಮಾ ನೋಡಿ ತುಂಬಾ ಇಷ್ಟ ಪಟ್ಟು ರಿಲೀಸ್ ಮಾಡಲು ಕೈ ಜೋಡಿಸಿದ್ದಾರೆ.

ಎಡಗೈಯೇ ಅಪಘಾತಕ್ಕೆ ಕಾರಣ ನಿರ್ದೇಶಕ ಸಮರ್ಥ್ ಕಡ್ಕೋಳ್ ನಿರ್ದೇಶನದ ಚೊಚ್ಚಲ ಸಿನಿಮಾ. ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾ ಇದಾಗಿದ್ದು ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದನ್ನೂ ಓದಿ :ಅಕ್ರಮ ಸಂಬಂಧಕ್ಕೆ ಸಹಾಯ; ಗುಪ್ತ ರೋಗ ಬಂದಿದ್ದಕ್ಕೆ ಸ್ನೇಹಿತನಿಗೆ ಗುಂಡಿ ತೋಡಿದ ಗೆಳೆಯ

ನಟ ದಿಗಂತ್ ಯಾವಾಗಲು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ನಟ ದಿಗಂತ್ ಮತ್ತೆ ಗೆದ್ದೇ ಗೆಲ್ತಾರೆ ಎನ್ನುವ ಬರವಸೆ ಕೂಡ ಮೂಡಿದೆ. ಎಡಗೈಯೇ ಅಪಘಾತಕ್ಕೆ ಕಾರಣ ಹೇಗಿರಲಿದೆ ಎನ್ನುವುದು ಜೂನ್ 13ಕ್ಕೆ ರಿಲೀಸ್ ಆದಮೇಲೆ ಗೊತ್ತಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments