ಹಾಸನ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹಾಸನದ ಭೂಮಿಕ್ ಸಾವನ್ನಪ್ಪಿದ್ದು. ಘಟನೆ ಸಂಬಂಧ ಭೂಮಿಕ್ ತಂದೆ ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನ್ನ ಮಗನಿಗೆ ಬಂದ ಸ್ಥಿತಿ, ನಿಮ್ಮ ಮಕ್ಕಳಿಗೆ ಬಂದಿದ್ದರೆ, ಹೀಗೆ ಪೋಟೊ ತೆಗೆಸಿಕೊಂಡು ಎಂಜಾಯ್ ಮಾಡ್ತಿದ್ದ್ರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ :ಮಹರಾಷ್ಟ್ರ ಚುನಾವಣೆಯಲ್ಲಿ ‘ಮ್ಯಾಚ್ ಫಿಕ್ಸಿಂಗ್’; ಚುನಾವಣ ಆಯೋಗದ ವಿರುದ್ದ ರಾಹುಲ್ ಗಂಭೀರ ಆರೋಪ
ಹಾಸನದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಲಕ್ಷ್ಮಣ್ “ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ನನ್ನ ಮಗ ಆಂಬುಲೆನ್ಸ್ ಇಲ್ಲದೆ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಕೈ ಕಾಲು ಹಿಡಿದು ಹೇಗೋ ಕರೆದೊಯ್ದಿದ್ದಾನೆ. ಅದೇ ಒಂದು ವೇಳೆ ಅಂಬುಲೆನ್ಸ್ ಇದ್ದಿದ್ದರೆ ನನ್ನ ಮಗ ಉಳಿತಿರಲಿಲ್ಲವೇ..? ಅವರ ಮಕ್ಕಳಿಗೆ ಹೀಗೆ ಆಗಿದ್ರೆ ಅವರು ಫೋಟೊ ತೆಗೆಸಿಕೊಳ್ತಿದ್ರಾ..? ಕಪ್ ಹಿಡಿದು ಎಂಜಾಯ್ ಮಾಡ್ತಿದ್ರಾ. ಇದನ್ನೂ ಓದಿ :ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ; ಜೈಲಿನಿಂದ ಹೊರಬರುತ್ತಲೆ ಸ್ಪಷ್ಟನೆ ಕೊಟ್ಟ ಮನು
“ಇದು ನನ್ನೊಬ್ಬನ ಕಣ್ಣೀರಲ್ಲ, ಘಟನೆಯಲ್ಲಿ ಸಾವನ್ನಪ್ಪಿದ 11 ಜನ ಕುಟುಂಬದವರ ಕಣ್ಣೀರು. ಯಾರಿಗೂ ಈ ಸ್ಥಿತಿ ಬರೊದು ಬೇಡಾ. ಅವರ ತಪ್ಪು ಮುಚ್ಚಿಕೊಳ್ಳಲು ಪೊಲೀಸರ ಅಮಾನತು ಮಾಡಿದಾರೆ. ನಾನು ಮಗನಿಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದೆ. ಯಾವ ತಂದೆ-ತಾಯಿಯು ಮಕ್ಕಳನ್ನ ಸಾಯಲಿ ಎಂದು ಕಳಿಸಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ :ಮಗನ ಸಮಾಧಿ ಬಳಿ ತಂದೆ ಮೂಕರೋಧನೆ; ಮೃತ ಪೂರ್ಣಚಂದ್ರ ಮನೆಯಲ್ಲಿ ಕರಗದ ಶೋಕ
ಮುಂದುವರಿದು ಮಾತನಾಡಿದ ಲಕ್ಷ್ಮಣ್ “ನನ್ನ ಮಗನಿಗೆ ಕ್ರಿಕೆಟ್ ಹುಚ್ಚಿರಲಿಲ್ಲ, ಕೇವಲ ಆಟದ ರೀತಿ ಆಡುತ್ತಿದ್ದ. ಸರ್ಕಾರ 11 ಜನರನ್ನ ಕೊಲೆ ಮಾಡಿದೆ. ಇವರೇ ದೊಡ್ಡ ಟೆರರಿಸ್ಟ್ ಗಳಾಗಿದ್ದಾರೆ. ಇಷ್ಟು ಅನಾಹುತ ಆದ ಮೇಲೂ ಇವರು ಫೋಟೊ ತೆಗೆಸಿಕೊಳ್ತಾರಲ್ಲ ಇದು ಎಷ್ಟು ನ್ಯಾಯ. ನಮ್ಮಂತವರ ಮಕ್ಕಳು ಬೀದಿಯಲ್ಲಿ ಸಾಯುತ್ತಿದ್ದರೆ. ಇವರು ಎಂಜಾಯ್ ಮಾಡ್ತಾರೆ. ಅವರ ಮಕ್ಕಳು ಮೊಮ್ಮಕ್ಕಳಿಗಾಗಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಮೃತ ಭೂಮಿಕ್ ತಂದೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.