ಅಂತರ್​ ರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಪಿಯೂಷ್​ ಚಾವ್ಲಾ

ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಕ್ರಿಕೆಟ್​ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಪಿಯೂಷ್​ ಚಾವ್ಲ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು. ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ :ರಾಮ ಮಂದಿರಕ್ಕೆ ಚಿನ್ನದ ಕಿರೀಟಗಳು ಸೇರಿದಂತೆ ಕೋಟ್ಯಾಂತರ ಮೌಲ್ಯದ ಆಭರಣ ದಾನ ನೀಡಿದ ಉದ್ಯಮಿ

ವಿಶ್ವ ಕ್ರಿಕೆಟ್​ನಲ್ಲಿ ನಿವೃತ್ತಿಯ ಪರ್ವ ಮುಂದುವರಿದಿದ್ದು. ದಿಗ್ಗಜ ಆಟಗಾರ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಟೆಸ್ಟ್​ ಮತ್ತು ಟಿ-20 ಕ್ರಿಕೆಟ್​ಗೆ ಕೆಲ ದಿನಗಳ ಹಿಂದಷ್ಟೇ ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಆಸ್ಟೇಲಿಯಾದ ಸ್ಟಾರ್ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್​ ಮತ್ತು ಸೌತ್​ ಆಫ್ರಿಕಾದ ಹೆನ್ರಿಚ್​ ಕ್ಲಾಸೆನ್​ ಕೂಡ ಅಂತರ್​ ರಾಷ್ಟ್ರೀಯ ಕ್ರಿಕೆಟ್​​ಗೆ ವಿಧಾಯ ಹೇಳಿದ್ದರು. ಇದರ ಬೆನ್ನಲ್ಲೇ ಸ್ಟಾರ್​ ಲೆಗ್​ ಸ್ಪಿನರ್​ ಪಿಯೂಷ್​ ಚಾವ್ಲ ಕ್ರಿಕೆಟ್​ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

37 ವರ್ಷದ ಪಿಯೂಷ್ ಚಾವ್ಲಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ತಮ್ಮ ನಿವೃತ್ತಿಯ ಬಗ್ಗೆ ತಿಳಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೊಸ್ಟ್ ಹಂಚಿಕೊಂಡಿರುವ ಚಾವ್ಲಾ, ಕ್ರಿಕೆಟ್​ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿರುವುದಾಗಿ ತಳಿಸಿದ್ದಾರೆ. ‘ಎರಡು ದಶಕಗಳ ಕಾಲ ಮೈದಾನದಲ್ಲಿ ಕಳೆದ ನಂತರ, ಈ ಸುಂದರ ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ’ ಎಂದು ಚಾವ್ಲಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಖ್ಯಾತ ನಟ ಶೈನ್​ ಚಾಕೋಗೆ ಗಂಭೀರ ಗಾಯ, ತಂದೆ ನಿಧನ

ಭಾರತ ತಂಡದಲ್ಲಿ 15ನೇ ವಯಸ್ಸಿಗೆ ಕ್ರಿಕೆಟ್​ ವೃತ್ತಿ ಜೀವನ ಆರಂಭಿಸಿದ್ದ ಪಿಯೂಷ್​ ಚಾವ್ಲ ಭಾರತದ ಅಂಡರ್-19 ವಿಶ್ವಕಪ್​ನಲ್ಲಿ 2 ಭಾರಿ ಭಾಗವಹಿಸಿದ್ದರು. ಭಾರತದ ಪರವಾಗಿ ಒಟ್ಟು 35 ಅಂತರ್​ ರಾಷ್ಟ್ರೀಯ ಪಂದ್ಯಗಳಾಡಿರುವ ಪಿಯೂಷ್​ ಚಾವ್ಲ 43 ವಿಕೆಟ್​ಗಳನ್ನು ಪಡೆದಿದ್ದಾರೆ.

RELATED ARTICLES

Related Articles

TRENDING ARTICLES