KSCA ಸಿಬ್ಬಂದಿಗಳಿಗೆ ಬಿಗ್​ ರಿಲೀಫ್​; ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್​

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾದ ಪ್ರಕರಣದಲ್ಲಿ ಕೆಎಸ್‌ಸಿಎ ಹೈಕೋರ್ಟ್​ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಮುಂದಿನ ವಿಚಾರಣೆಯನ್ನು ಜೂನ್​ 16ಕ್ಕೆ ಮುಂದೂಡಲಾಗಿದೆ.

ವಿಜಯೋತ್ಸವ ಕಾರ್ಯಕ್ರಮ ಆಯೋಜನೆಯಲ್ಲಿ ನಿರ್ಲಕ್ಷ ವಹಿಸಿದ ಆರೋಪದ ಮೇಲೆ ಆರ್​ಸಿಬಿ, ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್ ಮತ್ತು ಡಿಎನ್​ಎ ಇವೆಂಟ್​ ಮ್ಯಾನೇಜ್​ಮೆಂಟ್​ಗಳ ವಿರುದ್ದ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದರು. ಆರೋಪಿಗಳು ನ್ಯಾಯಾಲಯಕ್ಕೆ ರಿಟ್​ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕೆಎಸ್​ಸಿಎ ಅಧಿಕಾರಿಗಳಿಗೆ ರಿಲೀಫ್​ ಕೊಟ್ಟಿದೆ. ಇದನ್ನೂ ಓದಿ :ಒತ್ತಡ ಹೇರಿ ಕಾರ್ಯಕ್ರಮ ಆಯೋಜನೆ; ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ್​ ರಾಜು ತಲೆದಂಡ

ಅರ್ಜಿ ವಿಚಾರಣೆ ನಡೆಸಿದ ನಡೆಸಿದ ನ್ಯಾಯಾಧೀಶ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ, ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ. ಆದರೆ, ವಿಚಾರಣೆಗೆ ಸಹಕರಿಸುವಂತೆ ಅರ್ಜಿದಾರರಿಗೆ ಷರತ್ತು ವಿಧಿಸಿದೆ. ಈ ಮೂಲಕ ಕೆಎಸ್​ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜೈರಾಮ್‌ ಅವರಿಗೆ ರಿಲೀಫ್ ಸಿಕ್ಕಿದೆ. ಇನ್ನು ಆರ್​ಸಿಬಿ ಮಾರ್ಕೆಟಿಂಗ್​ ಹೆಡ್​ ನಿಖಿಲ್​ ಸೋಸಲೆ ಅರ್ಜಿ ವಿಚಾರಣೆಯನ್ನು ನ್ಯಾಯಲಯ ಸೋಮವಾರಕ್ಕೆ(ಜೂ.06) ಮುಂದೂಡಲಾಗಿದ್ದು. ಇದನ್ನೂ ಓದಿ :ಪೊಲೀಸ್ ಅಧಿಕಾರಿಗಳ ತಲೆದಂಡ; ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್​ ನಿಂಬಾಳ್ಕರ್​ ಎತ್ತಂಗಡಿ

RELATED ARTICLES

Related Articles

TRENDING ARTICLES