ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮೋದಿ; ಕಾಶ್ಮೀರದಲ್ಲಿ ರಾರಾಜಿಸಿ ತಿರಂಗ

ಜಮ್ಮು ಮತ್ತು ಕಾಶ್ಮೀರ್: ​ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜಗತ್ತಿನ ಎತ್ತರದ ರೈಲ್ವೇ ಸೇತುವೆಯನ್ನ ಉದ್ಘಾಟಿಸಿದ್ದು. ಜೊತೆಗೆ ಅನೇಕ ಅಭಿವೃದ್ದಿ ಯೋಜನೆಗಳನ್ನ ಉದ್ಘಾಟಿಸಿದ್ದಾರೆ.

ಪಹಲ್ಗಾಂ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಭಾರಿಗೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು. ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆಯನ್ನ ಉದ್ಘಾಟಿಸಿದ್ದಾರೆ. ಚೆನಾಬ್​ ನದಿಯಿಂದ ಸುಮಾರು 359 ಅಡಿ ಎತ್ತರದಲ್ಲಿರುವ ಈ ಸೇತುವೆ, ಐಫೆಲ್​ ಟವರ್​ನ ಎತ್ತರವನ್ನೂ ಮೀರಿಸಿದೆ. ಹೋಲಿಕೆ ಮಾಡಿ ನೋಡುವುದಾದರೆ ಈ ರೈಲ್ವೇ ಸೇತುವೆ ಐಫೆಲ್​ ಟವರ್​​ಗಿಂತ 35 ಅಡಿ ಎತ್ತರದಲ್ಲಿದೆ. ಇದನ್ನೂ ಓದಿ :ನಾವು ರಾಜೀನಾಮೆ ಕೊಡ್ತೀವಿ; ಪಹಲ್ಗಾಂ, ಕುಂಭಮೇಳದ ಘಟನೆಗೆ ಅವರು ರಾಜಿನಾಮೆ ಕೊಡ್ಲಿ;​ ಖರ್ಗೆ

ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಈ ಸೇತುವೆಯನ್ನ ನಿರ್ಮಿಸಿದ್ದು. ಇದು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದ್ದು. ಇದು ಈ ಪ್ರದೇಶದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ನಿರ್ಣಾಯಕ ಭಾಗವಾಗಿದೆ.

ಇದನ್ನೂ ಓದಿ :ಪೊಲೀಸರು ರಕ್ಷಣೆ ಮಾಡ್ತಿದ್ದರೆ, ಇವರು ಪೋಟೊ ಶೂಟ್​ ಮಾಡ್ತಿದ್ರು; ಸರ್ಕಾರದ ಮೇಲೆ ಆರ್​.ಅಶೋಕ್​ ವಾಗ್ದಾಳಿ

1,315 ಮೀಟರ್ ವಿಸ್ತೀರ್ಣವಿರುವ ಈ ಸೇತುವೆ, ತೀವ್ರ ಭೂಕಂಪ ಮತ್ತು ಗಂಟೆಗೆ 266 ಕಿ,ಮೀ ವೇಗದಲ್ಲಿ ಬೀಸುವ ಗಾಳಿಯನ್ನು ಕೂಡ ತಡೆದುಕೊಳ್ಳುವ ಸಾಮಾರ್ಥ್ಯವಿದೆ. ಚೆನಾಬ್ ಸೇತುವೆಯನ್ನು ಕಠಿಣ ಹಿಮಾಲಯನ್ ಪರಿಸರದಲ್ಲಿ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಇದರ ನಿರ್ಮಾಣವು ಅತ್ಯಾಧುನಿಕ ತಾಂತ್ರಿಕ ವಿಧಾನಗಳು ಮತ್ತು ವಸ್ತುಗಳನ್ನು ಬಳಸಿಕೊಂಡು ಭಾರತದ ಹೆಚ್ಚುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಮೊದಲ ಕೇಬಲ್​ ರೈಲ್ವೇ ಸೇತುವೆ ಉದ್ಘಾಟನೆ..!

ಚೆನಾಬ್ ಸೇತುವೆಯ ಜೊತೆಗೆ, ಪ್ರಧಾನಿ ಮೋದಿ ಅವರು ಭಾರತದ ಮೊದಲ ಕೇಬಲ್-ಸ್ಟೇಡ್ ರೈಲ್ವೆ ಸೇತುವೆಯಾದ ಅಂಜಿ ಖಾದ್ ಸೇತುವೆಯನ್ನು ಉದ್ಘಾಟಿಸಿದರು. ಜೊತೆಗೆ ಕತ್ರಾ ಮತ್ತು ಶ್ರೀನಗರ ನಡುವೆ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಈ ರೈಲುಗಳನ್ನು ವಿಶೇಷವಾಗಿ ಶೀತ ಹವಾಮಾನಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ :ಕಂಟೈನರ್​ ಲಾರಿ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ; ಮೂವರು ಸಾ*ವು

 

RELATED ARTICLES

Related Articles

TRENDING ARTICLES