ಕಾಮಿಡಿ ಕಿಲಾಡಿಗಳು ಸೀಸನ್ ಖ್ಯಾತಿಯ ಮಡೆನೂರು ಮನು ವಿರುದ್ದ ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ ಕ್ರಮ ತೆಗೆದುಕೊಂಡಿದ್ದು, ನಟನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಮಡೆನೂರು ಮನು ಅಭಿನಯದ ಮೊದಲ ಸಿನಿಮಾನೇ, ಕೊನೆಯ ಸಿನಿಮಾ ಆಗಿದೆ.
ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ರಿಲೀಸ್ ಮುನ್ನ ದಿನವೇ ಮನು ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಹೀಗಿರುವಾಗಲೇ ಮಡೆನೂರು ಮನುಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ, ಕನ್ನಡದ ಹಿರಿಯ ನಟರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ :ಪಕ್ಷ ವಿರೋಧಿ ಚಟುವಟಿಕೆ: ಶಾಸಕ ಎಸ್ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ BJPಯಿಂದ ಉಚ್ಚಾಟನೆ