ಯುದ್ಧ ನಡೆದರೆ ನಾವು ಭಾರತದ ಜೊತೆ ನಿಲ್ಲಬೇಕು: ಪಾಕ್‌ನಲ್ಲಿರುವ ಪಶ್ತೂನ್‌ ಮುಸ್ಲಿಮರಿಗೆ ಕರೆ

ಇಸ್ಲಾಮಾಬಾದ್‌: ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುತ್ತಿರುವ ಪಾಕಿಸ್ತಾನ ತನ್ನದೇ ಮುಸ್ಲಿಂ ಮುಖಂಡರ ವಿರೋಧ ವ್ಯಕ್ತಪಡಿಸುತ್ತಿದ್ದು. ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ನಾವು ಭಾರತದ ಜೊತೆ ನಿಲ್ಲಬೇಕು ಎಂದು ಪಶ್ತೂನ್‌ ಮುಸ್ಲಿಮರಿಗೆ ಧರ್ಮ ಗುರುವೊಬ್ಬರು ಕರೆ ನೀಡಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಇಸ್ಲಾಮಿಕ್ ಧರ್ಮಪ್ರಚಾರಕರೊಬ್ಬರು ಈ ಕುರಿತು ಘೋಷಣೆ ಮಾಡಿದ್ದಾರೆ. ‘ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಶ್ತೂನ್ ಜನರಾದ ನಾವು ಭಾರತೀಯ ಸೈನ್ಯದೊಂದಿಗೆ ನಿಲ್ಲಬೇಕು. ಪಾಕ್‌ ಸೈನಿಕರು ನಮ್ಮ ಮೇಲೆ ಮೇಲೆ ದೌರ್ಜನ್ಯಗಳನ್ನು ಎಸಗಿದ್ದಾರೆ. ನಾವು ಎಂದಿಗೂ ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :NIA ತನಿಖೆ ನಡೆಸಿದರೆ, ಕಾಂಗ್ರೆಸ್​-ಪಿಎಫ್​ಐ ನಡುವಿನ ಹೊಂದಾಣಿಕೆ ಹೊರ ಬರುತ್ತದೆ: ಬ್ರಿಜೇಶ್​ ಚೌಟ

ಇನ್ನು ಪಾಕ್​ ಮತ್ತು ಭಾರತದ ಗಡಿಯಲ್ಲಿ ಯುದ್ದದ ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಎಲ್ಲಾ ಪಡೆಯ ಸೇನೆಗಳು ಯುದ್ದಭ್ಯಾಸ ಆರಂಭಿಸಿವೆ.

RELATED ARTICLES

Related Articles

TRENDING ARTICLES