ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಗೃಹ ಸಚಿವ ಪರಮೇಶ್ವರ್ ಸೇರಿದಂತೆ, ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಿದರೆ ಕಾಂಗ್ರೆಸ್ ಮತ್ತು ಪಿಎಫ್ಐ ನಡುವಿನ ಹೊಂದಾಣಿಕೆ ಹೊರಗೆ ಬರುತ್ತದೆ ಎಂಬ ಭಯ ಸರ್ಕಾರಕ್ಕೆ ಇದೆ ಎಂದು ಬ್ರಿಜೇಶ್ ಚೌಟ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬ್ರಿಜೇಶ್ ಚೌಟ “ಗೃಹ ಸಚಿವ ಪರಮೇಶ್ವರ್ ಪಿಎಫ್ಐ ಕ್ಯಾಡರ್ಗಳನ್ನು ಸಂತೈಸಲು ಬಂದು ಹೋಗಿದ್ದಾರೆ. ಈ ಪ್ರಕರಣವನ್ನ NIA ತನಿಖೆಗೆ ಕೊಡಲು ಆಗಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ NIAಗೆ ಕೊಟ್ಟರೆ ಕಾಂಗ್ರೆಸ್ ಮತ್ತು ಪಿಎಫ್ಐ ಹೊಂದಾಣಿಕೆ ಹೊರಬರುವ ಭಯ ಸರ್ಕಾರಕ್ಕೆ ಇದೆಯಾ..?. ಸ್ಪೀಕರ್ ಖಾದರ್, ಗೃಹ ಸಚಿವರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಇದನ್ನೂ ಓದಿ :‘ಸಿದ್ದರಾಮಯ್ಯನನ್ನ ಕೊಂದರೆ ಹಿಂದುಗಳಿಗೆ ನೆಮ್ಮದಿ ಸಿಗುತ್ತೆ’ ಎಂದು ಪೋಸ್ಟ್ ಹಾಕಿದ್ದ ಹೋಂಗಾರ್ಡ್ ಅರೆಸ್ಟ್
ಯುಟಿ ಖಾದರ್ ಅಣತಿಯಂತೆ ಸಿದ್ದರಾಮಯ್ಯ ಕೈ ಕಟ್ಟಿ ಹಾಕುವ ಕೆಲಸ ಆಗಿದೆ ಎಂದು ಹೇಳಿದ ಬ್ರಿಜೇಶ್ ಚೌಟಾ ‘ತನಿಖೆಗೆ ಬೆಂಬಲ ನೀಡಬೇಕಾದ ಸ್ಪೀಕರ್, ಎನ್ಐಎ ತನಿಖೆಗೆ ಅಡ್ಡಿ ಬರುವುದೇ ? ತನಿಖೆ ಆಗೋ ಮೊದಲೇ ಸ್ಪೀಕರ್ ಖಾದರ್ ಫಾಜಿಲ್ ಕುಟುಂಬದ ಪರ ನಿಂತು ಸಮರ್ಥಿಸುವ ಆತುರತೆ ಏನಿತ್ತು ? 2023ರಲ್ಲಿ ಇಂಡಿಯಾ ಟುಡೇ PFI ಮತ್ತು SDPI ಲಿಂಕಗ ಬಗ್ಗೆ ವರದಿ ಮಾಡಿತ್ತು. ರಾಷ್ಟ್ರ ವಿರೋಧಿ, ಇಸ್ಲಾಮಿಕ್ ಮೂಲಭೂತವಾದ, ಜಿಹಾದಿ ಎಲಿಮೆಂಟ್ ಬಗ್ಗೆ ವರದಿ ಬಂದಿತ್ತು.
ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನ ಎಸ್ಡಿಪಿಐ ನಾಯಕರು ಪಿಎಫ್ಐ ನೆಟ್ವರ್ಕ್ ಬೆಳೆಸಿದ್ದನ್ನ ಅವರೇ ಒಪ್ಪಿಕೊಂಡಿದ್ದಾರೆ. ಪ್ರವೀಣ್ ನೆಟ್ಟಾರು ಪ್ರಕರಣ ಸೂತ್ರಧಾರ ಮುಸ್ತಫಾ ಪೈಚಾರುವನ್ನು ಬಂಧಿಸಿದ್ದು NIA. ಆತ ಚೆನೈನಲ್ಲಿ ಅವಿತುಕೊಳ್ಳಲು ಸಹಾಯ ಮಾಡಿದವರನ್ನು ಎನ್ಐಎ ಬಂಧಿಸಿತ್ತು. ಆರೋಪಿಗಳ ಜೊತೆ ಅವರ ಹಿಡನ್ ಅಜೆಂಡವನ್ನು ಬಯಲಿಗೆ ಎಳೆದಿತ್ತು. ಇದನೆಲ್ಲ ಸ್ಥಳಿಯ ಪೊಲೀಸರು ಮಾಡಲಿಲ್ಲ. ಇದಕ್ಕೆ ಎನ್ಐಎ ಬರಬೇಕಯ್ತು.
ಇದನ್ನೂ ಓದಿ :‘ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕನ್ನಡಿಗರು ನಿರ್ಧರಿಸಲಿ’: ಸುದೀರ್ಘ ಪತ್ರ ಬರೆದ ಸೋನು ನಿಗಮ್
ಫಾಜಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಟ್ಟವರು ಕರಾವಳಿಗೆ ಕೆಟ್ಟ ಹೆಸರು ತರುವ ಯತ್ನದಲ್ಲಿದ್ದಾರೆ. ಎಲ್ಲ ಸುಳ್ಳುಗಳನ್ನು ಬದಿಗಿಟ್ಟು ರಾಜ್ಯ ಸರ್ಕಾರ ತಕ್ಷಣ ಈ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಬೇಕು. ಕರಾವಳಿಯಲ್ಲಿ ಹರಡಿರುವ ರಕ್ತಸಿಕ್ತ ಜಾಲವನ್ನು ಕಿತ್ತು ಹಾಕುವ ಕೆಲಸ ಆಗಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಹಳಿ ತಪ್ಪಿಸುವ ಸಂಚು ಇದರ ಹಿಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ರಾಷ್ಟ್ರೀಯ ಹಿತ ಬಯಸುವವರು. ಕಮ್ಯುನಲ್ ಎಂದು ಹೇಳಿ ಪ್ರಕರಣದ ನೈಜತೆಯನ್ನು ಮರೆಮಾಚಬೇಡಿ ಎಂದು ಬ್ರಿಜೇಶ್ ಚೌಟಾ ಹೇಳಿದರು.


