‘ಸಿದ್ದರಾಮಯ್ಯನನ್ನ ಕೊಂದರೆ ಹಿಂದುಗಳಿಗೆ ನೆಮ್ಮದಿ ಸಿಗುತ್ತೆ’ ಎಂದು ಪೋಸ್ಟ್​ ಹಾಕಿದ್ದ ಹೋಂಗಾರ್ಡ್ ಅರೆಸ್ಟ್​

ಉಡುಪಿ : ‘ಸಿದ್ದರಾಮಯ್ಯನನ್ನ ಕೊಂದರೆ ಹಿಂದುಗಳಿಗೆ ನೆಮ್ಮದಿ ಸಿಗುತ್ತೆ’ ಎಂದು ಪೋಸ್ಟ್​ ಹಾಕಿದ್ದ ಹೋಂ ಗಾರ್ಡ್​ನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದು. ಯೂತ್​ ಕಾಂಗ್ರೆಸ್​ ಅಧ್ಯಕ್ಷ ಸೂರಜ್​ ಶೆಟ್ಟಿ ನೀಡಿದ ದೂರಿನ ಆಧಾರದ ಮೇಲೆ ಈತನನ್ನು ಬಂಧಿಸಿದ್ದಾರೆ. ಬಂಧನವಾದ ಹೋಂ ಗಾರ್ಡ್​ನನ್ನು ಸಂಪತ್​ ಸಾಲಿಯಾನ್​ ಎಂದು ಗುರುತಿಸಲಾಗಿದೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು 8 ಜನರನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಇದರ ಮಧ್ಯ ಸುಹಾಸ್ ಶೆಟ್ಟಿ ಕೊಲೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿವೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಹೋಂ ಗಾರ್ಡ್​ ಅವಹೇಳಕನಕಾರಿ ಮತ್ತು ಬೆದರಿಕೆ ಕಮೆಂಟ್ ಮಾಡಿದ್ದಾನೆ.

ಇದನ್ನೂ ಓದಿ :‘ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕನ್ನಡಿಗರು ನಿರ್ಧರಿಸಲಿ’: ಸುದೀರ್ಘ ಪತ್ರ ಬರೆದ ಸೋನು ನಿಗಮ್​

ಉಡುಪಿಯ ಕಾರ್ಕಳದ, ಸಾಣೂರು ನಿವಾಸಿ ಸಂಪತ್ ಸಾಲಿಯಾನ್​ ಎಂಬಾತ ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಸಿಎಂ ಸಿದ್ದರಾಮಯ್ಯನನ್ನು ಕೊಂದರೆ ಹಿಂದೂಗಳಿಗೆ ನೆಮ್ಮದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದಾನೆ. ಈ ಸಂಬಂಧ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ದೂರು ದಾಖಲಿಸಿದ್ದು. ದೂರಿನ ಮೇರೆಗೆ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES