ಹಾಸನ: ಆರಕ್ಷಕ ಸಿಬ್ಬಂದಿಯೊಬ್ಬರು ಬಡ್ಡಿ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದ್ದು. ಪೊಲೀಸ್ ಸಿಬ್ಬಂದಿಯ ಕಿರುಕುಳ ಸಹಿಸಲಾರದೆ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿದ ವ್ಯಕ್ತಿಯನ್ನು ಮೊಹಮ್ಮದ್ ತನ್ವೀರ್ ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಘಟನೆ ನಡೆದಿದ್ದು. ಹಾಸನದ ಎಸ್ಪಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸಟೆಬಲ್ ಅರುಣ್ ಎಂಬಾತ ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ. ಅರುಣ್ ಬಳಿ ಮೊಹಮ್ಮದ್ ತನ್ವೀರ್ ಎರಡು ವರ್ಷಗಳ ಹಿಂದೆ ಕೋಳಿ ಅಂಗಡಿ ಮಾಡಲು ಎಂದು 80 ಸಾವಿರ ಹಣವನ್ನು ಸಾಲವಾಗಿ ಪಡೆದಿದ್ದ. ಈ ಹಣಕ್ಕೆ ವಾರಕ್ಕೆ 7800 ರೂಪಾಯಿ ಬಡ್ಡಿಯನ್ನು ಕಟ್ಟುತ್ತಿದ್ದ. ಇಲ್ಲಿಯವರೆಗೂ 80 ಸಾವಿರ ಹಣಕ್ಕೆ 2 ಲಕ್ಷದಷ್ಟೂ ಹಣವನ್ನು ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಬ್ರೈನ್ ಟ್ಯೂಮರ್ ಸಮಸ್ಯೆ: ಜೈನ ಧರ್ಮದ ‘ಸಲ್ಲೇಖನ ವ್ರತ’ ಕೈಗೊಂಡು ಜೀವ ಬಿಟ್ಟ 3 ವರ್ಷದ ಕಂದಮ್ಮ
ವಾರಕ್ಕೆ 7800 ರೂಪಾಯಿಯಂತೆ ಪ್ರತಿ ತಿಂಗಳು ಆತ 28 ಸಾವಿರ ಹಣವನ್ನು ಬಡ್ಡಿ ರೀತಿ ಅರುಣ್ಗೆ ಕಟ್ಟುತ್ತಿದ್ದ. ಅಷ್ಟೇ ಅಲ್ಲದೇ ಬೇರೆ ಬೇರೆಯವರ ಬಳಿ ಸುಮಾರು 5 ಲಕ್ಷ ಹಣವನ್ನು ತನ್ವೀರ್ ಸಾಲವಾಗಿ ಪಡೆದಿದ್ದ. ದುಡಿದ ಹಣವನೆಲ್ಲಾ ಬಡ್ಡಿಗೆ ಕಟ್ಟುತ್ತಿದ್ದ. ಇದರಿಂದ ಬೇಸತ್ತು ತನ್ವೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನು ಓದಿ :‘ಕನ್ನಡಿಗರು ಬಹಳ ಒಳ್ಳೆಯವರು’: ವಿವಾದದ ಬಳಿಕ ಬೆಣ್ಣೆ ಹಚ್ಚಿದ ಸೋನು ನಿಗಮ್
ಇನ್ನು ವಿಷ ಸೇವಿಸಿ ಅಸ್ವಸ್ಥನಾಗಿದ್ದ ತನ್ವೀರ್ನನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಮೀಟರ್ ಬಡ್ಡಿ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


