ತಮಿಳುನಾಡಿನ ರಾಜ್ಯಧ್ಯಕ್ಷ ಸ್ಥಾನಕ್ಕೆ ಅಣ್ಣಮಲೈ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು. ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ ಅಣ್ಣಮಲೈ ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
2026ಕ್ಕೆ ತಮಿಳುನಾಡಿನಲ್ಲಿ ವಿಧಾನಸಭ ಚುನಾವಣೆ ನಡೆಯಲಿದ್ದು. ಚುನಾವಣೆಗೆ ಈಗಾಗಲೇ ತಯಾರಿಗಳು ಆರಂಭವಾಗಿದೆ. ಡಿಎಂಕೆಯನ್ನು ಶತಾಯ ಗತಾಯ ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ವಿಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ನಡೆಸಿವೆ. 2023 ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ವಿಭಜನೆಯಾಗಲು ಅಣ್ಣಾಮಲೈ ಕಾರಣ ಎನ್ನಲಾಗಿತ್ತು. ಈಗ ಪಕ್ಷಗಳ ನಡುವಿನ ಮೈತ್ರಿ ಮಾತುಕತೆಗಳು ವೇಗಗೊಂಡಿದ್ದು, ಎಐಎಡಿಎಂಕೆ ಬೇಡಿಕೆಯಂತೆ ಅಣ್ಣಮಲೈ ತಮ್ಮ ರಾಜ್ಯಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ತಂದೆಯ ಸಾವಿನ ನೋವಿನಲ್ಲೂ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ಅಣ್ಣ ತಂಗಿ
ಜೊತೆಗೆ ತಮಿಳು ರಾಜಕೀಯದಲ್ಲಿ ಜಾತಿ ಸಮೀಕರಣವು ಬಹುದೊಡ್ಡ ಅಂಶವಾಗಿದ್ದು. ಬಿಜೆಪಿಯ ಅಣ್ಣಮಲೈ ಮತ್ತು ಎಐಎಡಿಎಂಕೆಯ ಪಳನಿಸ್ವಾಮಿ ಇಬ್ಬರು ಪ್ರಬಲ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರು. ಇಬ್ಬರು ಗೌಡರ್ ಜಾತಿಯವರಾಗಿದ್ದು. ತಮಿಳುನಾಡಿದ ಪಶ್ಚಿಮ ಕೊಂಗು ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇದರಿಂದ ಮತ ಹಂಚಿಕೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಈ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ ಎಂದು ತಿಳಿದು ಬಂದಿದೆ.


