ಡೆವಿಲ್​ ಶೂಟಿಂಗ್​ ಮುಗಿಸಿ ಬೆಂಗಳೂರಿಗೆ ವಾಪಸಾದ ನಟ ದರ್ಶನ್​

ಬೆಂಗಳೂರು : ಕಳೆದ 10 ದಿನಗಳಿಂದ ಡೆವಿಲ್​ ಶೂಟಿಂಗ್​ ನಿಮಿತ್ತ ರಾಜಸ್ಥಾನಕ್ಕೆ ತೆರಳಿದ್ದ ನಟ ದರ್ಶನ್​ ಬೆಂಗಳೂರಿಗೆ ವಾಪಸಾಗಿದ್ದಾರೆ. ಡೆವಿಲ್​ ಶೂಟಿಂಗ್​ ತೆರಳಿದ್ದ ದರ್ಶನ್​ಗೆ ಪತ್ನಿ ವಿಜಯ್​ಲಕ್ಷ್ಮಿ ಮತ್ತು ಮಗ ವಿನೀಶ್​ ಸಾಥ್​ ನೀಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಡೆವಿಲ್​​ ಸಿನಿಮಾ ಶೂಟಿಂಗ್​ ಭರ್ಜರಿಯಾಗಿ ನಡೆದಿದ್ದು. ಜೈಲಿನಿಂದ ಹೊರಬಂದ ನಟ ದರ್ಶನ್​ ಮೊದಲ ಬಾರಿಗೆ ಹೊರ ರಾಜ್ಯದಲ್ಲಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಶೂಟಿಂಗ್​ ಮುಗಿಸಿದ ನಂತರ ದರ್ಶನ್​ ಬೆಂಗಳೂರಿಗೆ ವಾಪಾಸಗಿದ್ದು.  ಇಂದು ಮಧ್ಯಾಹ್ನ ನಟ ದರ್ಶನ್ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಇದನ್ನೂ ಓದಿ : ವಕ್ಫ್​ ಮಸೂದೆ ಅಂಗೀಕಾರ ಬೆನ್ನಲ್ಲೆ ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ..!

ಇತ್ತೀಚಿಗಷ್ಟೇ ವಿಜಯಲಕ್ಷ್ಮಿ ಅವರು ರಾಜಸ್ಥಾನದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಚಿತ್ರ ಹೊರಬರುತ್ತಿದ್ದು, ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ಇನ್ನಿತರರು ತೆರೆಹಂಚಿಕೊಂಡಿದ್ದಾರೆ

RELATED ARTICLES

Related Articles

TRENDING ARTICLES