ಹಾಯ್​ ಅಂದ್ರೆ ಬಾಯ್​ ಬಾಯ್​ ಅಂತ ಓಡಿಹೋಗ್ಬೇಕು; ಸತೀಶ್ ಜಾರಕಿಹೊಳಿ

ಬೆಂಗಳೂರು : ರಾಜ್ಯದಲ್ಲಿ ಹನಿಟ್ರ್ಯಾಪ್​ ವಿಚಾರ ಕಳೆದ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದು. ಸಚಿವ ಕೆ.ಎನ್​ ರಾಜಣ್ಣ ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದರು. ಇದರ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿಕೆಶಿ ಹನಿಟ್ರ್ಯಾಪ್​ ಮಾಡುವವರು ಹಾಯ್​ ಅಂದರೆ ಇವರು ಹಲೋ ಎನ್ನುತ್ತಾರೆ. ಇವರು ಸುಮ್ಮನ್ನಿದ್ದರೆ ಯಾರು ಹನಿಟ್ರ್ಯಾಪ್​ ಮಾಡುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಸತೀಶ್ ಜಾರಕಿಹೊಳಿ ಟಾಂಗ್​ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ‘ನಾವು ಎಲ್ಲರಿಂದ ಬಹಳ ಎಚ್ಚರವಾಗಿರಬೇಕು. ಇಂತಹದಕ್ಕೆಲ್ಲಾ ಇತೀಶ್ರೀ ಹಾಡಬೇಕು. ಬೇರೆಯವರು ಹಾಯ್​ ಎಂದಾಗ ನಾವು ಹಾಯ್​ ಎನ್ನಬಾರದು. ಅವರು ಹಾಯ್​ ಎಂದರೆ ನಾವು ಬಾಯ್​,ಬಾಯ್​ ಎಂದು ಓಡಿಹೋಗಬೇಕು. ರಾಜಣ್ಣ ಹಾಯ್​ ಅಂದವರಿಗೆ ಬಾಯ್​ ಬಾಯ್​ ಅಂದಿದ್ದಾರೆ.

ಇದನ್ನೂ ಓದಿ :ಮದುವೆಯಾಗಬೇಕಿದ್ದ ಹುಡುಗನನ್ನೇ ಕೊಲ್ಲಲ್ಲು ಸುಪಾರಿ ಕೊಟ್ಟ ವಧು..!

ನಾವೆಲ್ಲರೂ ರಾಜಣ್ಣನ ಹಾಗೆ ಇರಬೇಕೂ, ಅವರು ಹಾಯ್​ ಅಂದರೆ ನಾವು ಹಾಯ್​ ಅನ್ನಬಾರದು. ರಾಜಣ್ಣ ಮೊದಲು ಹಾಯ್​ ಅಂದಿರಬೇಕು. ಆದರೆ ನನ್ನ ಜೊತೆ ಮಾತಾಡಿದಾಗ ಬಾಯ್​ ಎಂದಿದ್ದೇನೆ ಎಂದು ಹೇಳಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES