ವರಿಷ್ಟರ ಜೊತೆ ಮಾತನಾಡಿ ಯತ್ನಾಳರನ್ನು ಪಕ್ಷಕ್ಕೆ ಮರಳಿ ಕರೆತರುತ್ತೇವೆ: ಕುಮಾರ್​ ಬಂಗಾರಪ್ಪ

ಬೆಂಗಳೂರು : ಬಿಜೆಪಿ ರೆಬಲ್​ ನಾಯಕ ಕುಮಾರ್​ ಬಂಗಾರಪ್ಪ ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದ್ದು. ವಕ್ಫ್​ ಬಿಲ್​ ಅಂಗೀಕರಿಸಿದಕ್ಕೆ ಧನ್ಯವಾದ ಅರ್ಪಿಸಿದರು. ಈ ವೇಳೆ ಬಿಜೆಪಿ ಬೆಲೆ ಏರಿಕೆ ವಿರುದ್ದದ ಪ್ರತಿಭಟನೆ ಕುರಿತು ಮಾತನಾಡಿದ್ದು. ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪನವರು ಮಗನಿಗಾಗಿ ಪ್ರತಿಭಟನೆ ಬಂದು ಕುಳಿತಿದ್ದಾರೆ. ವಿಜಯೇಂದ್ರನೇ ಅವರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿನ ಒಳಜಗಳ ಯತ್ನಾಳ್​ ಉಚ್ಚಾಟನೆಯ ನಂತರವೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇದಕ್ಕೆ ಪೂರಕವಾಗುವಂತೆ ಬಿಜೆಪಿ ರೆಬಲ್ಸ್​ ನಾಯಕರು ಈಗಲೂ ಯತ್ನಾಳ್​ ಕಡೆ ಹೇಳಿಕೆ ನೀಡುತ್ತಿದ್ದು. ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಿಂದಲೂ ದೂರ ಸರಿದಿದ್ದಾರೆ. ಜೊತೆಗೆ ಇಂದು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಕುಮಾರ್ ಬಂಗಾರಪ್ಪ ಈ ಕುರಿತು ಹೇಳಿಕೆ ನೀಡಿದ್ದು. ‘ಯಡಿಯೂರಪ್ಪನವರು ಮಗನಿಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಂತಹ ಹಿರಿಯ ಮುತ್ಸದ್ದಿ ನಾಯಕನನ್ನು ವಿಜಯೇಂದ್ರ ಪ್ರತಿಭಟನೆಗೆ ಕರೆತಂದಿದ್ದಾರೆ ಎಂದು ಹೇಳಿದರು.

ವರಿಷ್ಟರ ಜೊತೆ ಮಾತನಾಡಿ ಯತ್ನಾಳರನ್ನು ಪಕ್ಷಕ್ಕೆ ಮರಳಿ ಕರೆತರುತ್ತೇವೆ..! 

ಯತ್ನಳಾ ಉಚ್ಚಾಟನೆ ಕುರಿತು ಮಾತನಾಡಿದ ಕುಮಾರ್​ ಬಂಗಾರಪ್ಪ ‘ಯತ್ನಾಳ್ ಉಚ್ಚಾಟನೆ ನಮಗೆ ನೋವುಂಟು ಮಾಡಿದೆ, ಆದರು ನಾವು ಹೋರಾಟ ಮಾಡ್ತೀವಿ, ನಮಗೆ ಪಕ್ಷದ ಮೇಲೆ ಯಾವುದೇ ಸಿಟ್ಟಿಲ್ಲ, ನಮಗೆ ಇವರ ಗುಂಪಿನ ಮೇಲೆ ಇದೆ. ಇನ್ನೂ ಮೂರು ವರ್ಷ ಇದೆ ಹೋರಾಟ ಮಾಡಬೇಕಿದೆ. ಕಾಂಗ್ರೆಸ್​ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ : ಬಿಜೆಪಿ ಕಾಯಕರ್ತ ಆತ್ಮಹ*ತ್ಯೆ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ದ ಗಂಭೀರ ಆರೋಪ..!

ಸ್ಥಳೀಯ ಚುನಾವಣೆಗಳು ಒಂದೂ ಆಗಿಲ್ಲ, ಇಲ್ಲಿ ಒಂದು ಮಳೆ ಬಂದರೆ ಸಾಕು ಅಧೋಗತಿಗೆ ಬೆಂಗಳೂರು ಹೋಗ್ತಾ ಇದೆ. ಆದಷ್ಟು ಬೇಗ ನಾವು ವರಿಷ್ಠರ ಜೊತೆ ಮಾತನಾಡಿ ಮನವರಿಕೆ ಮಾಡಿಕೊಡ್ತೀವಿ. ಯತ್ನಾಳ್​ರನ್ನು ಪಕ್ಷಕ್ಕ ವಾಪಸ್ ತಗೆದುಕೊಳ್ಳಿ ಅಂತ ಹೇಳ್ತೀವಿ. ಅವರ ಭಾಷೆ ಕಟು ಆಗಿರಬಹುದು. ಮುಂದಿನ ಚುನಾವಣೆಗೆ ಅವರನ್ನು ಭದ್ರ ಮಾಡ್ತೀವಿ ಎಂದು ಹೇಳಿದರು.

ವಕ್ಫ್​ ಬಿಲ್​ಪಾಸ್​ ಆಗಿದ್ದಕ್ಕೆ ಕುಮಾರ್​ ಬಂಗಾರಪ್ಪ ಧನ್ಯವಾದ..!

ವಕ್ಫ್ ಬಿಲ್​ಪಾಸ್ ಆಗಿದೆ ಇದಕ್ಕೆ ಧನ್ಯವಾದಗಳನ್ನು ಹೇಳಿದ ಕುಮಾರ್ ಬಂಗಾರಪ್ಪ ‘ಹತ್ತಾರು ದಶಕದಿಂದ ಇದ್ದ ಸಮಸ್ಯೆ ಬಗೆಹರಿದಿದೆ. ರಾಜ್ಯ ಸಭೆಯಲ್ಲೂ ಇದು ಅನುಮೋದನೆ ಆಗಿದೆ, ನಾವು ಕರ್ನಾಟಕದಲ್ಲಿ ಹೋರಾಟ ಮಾಡಿದ್ದೆವು, ನಮ್ಮ ಅನೇಕ ವಿಚಾರ ದಾಖಲೆ ಸಮೇತವಾಗಿ ಜಗದಾಂಬಿಕಾ ಪಾಲ್​ಗೆ ನೀಡಿದ್ದೆವು. ಅವರ ಮಾರ್ಗದರ್ಶನದಲ್ಲಿ ನಾವು ನಡೆದೆವು. ಹಾಗಾಗಿ ನಮಗೆ ಸಮಸ್ಯೆ ಏನಿದೆ ಅನ್ನೋದು ಗೊತ್ತಾಯ್ತು. ದೇಶಕ್ಕೆ ಇಂದು ನಿರಾಳವಾಗಿದೆ.

ರಾಷ್ಟ್ರದಲ್ಲಿ ಆಗಿರುವ ಸಮಸ್ಯೆ ಈ ಬಿಲ್ ನಿಂದ ಬಗಹರಿದಿದೆ. ಜೆಪಿಸಿ ರಚನೆ ಆದ ಬಳಿಕ ಮಾಹಿತಿ ಸಂಗ್ರಹದ ಬಳಿಕ ಈ ಕಾನೂನು ಮಾಡಿದ್ದಾರೆ. ನಮಗೂ ಒಂದು ಶಕ್ತಿ ಸಿಕ್ಕಂತಾಯ್ತು. ಮುಡಾ ಹಾಗೂ ವಾಲ್ಮಿಕಿ ಹೋರಾಟ ಅರ್ಧಕ್ಕೆ ನಿಲ್ತು. ಆದರೆ ವಕ್ಫ್ ಹೋರಾಟಕ್ಕೆ ನಾವು ತಾರ್ಕಿಕ ಅಂತ್ಯ ಕಾಣಿಸಿದ್ದೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES