ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಹನಿಗ್ಯಾಂಗ್ ಒಂದು 68ರ ವೃದ್ದನಿಗೆ ಹನಿಟ್ರ್ಯಾಪ್ ಮಾಡಿ 2 ಕೋಟಿಗೆ ಡಿಮ್ಯಾಂಡ್ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು.. ವಿಧಾನಸೌದದಿಂದ ಹಿಡಿದು ಎಲ್ಲೆಲ್ಲೂ ಹನಿಟ್ರ್ಯಾಪ್ ಹಂಗಾಮ ಮಾಡುತ್ತಿದ್ದು. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ದಾಖಲಾಗಿದೆ. 68ರ ವೃದ್ದನಿಗೆ ಹನಿಟ್ರ್ಯಾಪ್ ಮಾಡಿದ್ದು. ಅಜಯ್ ಮತ್ತು ಅಭಿ ಎಂಬುವವರು ವೃದ್ದನಿಗೆ 2 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಖಾಸಗಿ ವಿಡಿಯೋಗಳನ್ನು ಚಿತ್ರಿಕರಿಸಿಕೊಂಡು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ :ಹೆಂಡತಿ ಕೊ*ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ಮುಂದೆ, ಪ್ರತ್ಯಕ್ಷವಾದ ಹೆಂಡತಿ..!
ಕೋರಮಂಗಲದ ಕೆಫೆಯೊಂದರಲ್ಲಿ ವೃದ್ದನೊಂದಿಗೆ ಬೆದರಿಕೆ ಹಾಕಿದ್ದ ಆರೋಪಿಗಳು. 40 ಲಕ್ಷ ಹಣಕ್ಕೆ ಡೀಲ್ ಕುದುರಿಸಿದ್ದರು. ಎರಡು ಮೂರು ದಿನದೊಳಗೆ ಹಣ ನೀಡುವಂತೆ ವೃದ್ದನಿಗೆ ಬೆದರಿಕೆಯನ್ನು ಹಾಕಿದ್ದರು. ಆದರೆ ವೃದ್ದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಪಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.


