ಬೆಂಗಳೂರು: ಇವರು ಮೂರನೇ ಕಣ್ಣಿನ ಒಡೆಯರು, ತಮ್ಮ ಬದುಕು ಎಷ್ಟೇ ದುಃಖ ಇದ್ದರು, ಇತರರ ಬದುಕಿನಲ್ಲಿ ಸ್ಮೈಲ್ ಪ್ಲೀಜ್ ಎಂದು ಹೇಳುವ ಧೀರರು, ನಗುವೆ ಮರೆತವರ ಬದುಕಲ್ಲಿ ನಗುವ ತರಿಸಿ ಆ ಗಳಿಗೆಯನ್ನ ಸೆರೆ ಹಿಡಿದು ಸವಿಯಾಗಿಸುವರು. ಆದ್ರೀಗ ಇವರ ಬದುಕು ಕತ್ತಲೆಯಲ್ಲೇ ಸಾಗುತ್ತಿದೆ. ಹಾಗಿದ್ರೆ ಯಾರಿವರು ಏನ್ ಇವರ ಕಥೆ ಅಂತೀರಾ ಹೇಳ್ತೀವಿ ಕೇಳಿ.
ಹೌದು ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಾ ಇದ್ದಂತೆ, ಮೊಬೈಲ್ಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲೂ ಈಗಂತೂ ಸ್ಮಾರ್ಟ್ಫೋನ್ಗಳಿಲ್ಲದೇ ಜನರ ಜೀವನವೇ ನಡೆಯೋದಿಲ್ಲ ಅನ್ನೋ ರೀತಿಯಾಗಿದ್ದು. ಮಾತನಾಡುವುದರಿಂದ ಹಿಡಿದು ಫೋಟೋ ಕ್ಲಿಕಿಸಿಕೊಳ್ಳೋವರೆಗೂ ಪ್ರತಿಯೊಬ್ವರಿಗೂ ಫೋನ್ ಅಗತ್ಯವಾಗಿಬಿಟ್ಟಿದೆ. ಆದರೆ ಈ ಸ್ಮಾರ್ಟ್ ಫೋನ್ಗಳ ಹಾವಳಿಯಿಂದ ಪ್ರವಾಸಿ ಛಾಯಾಗ್ರಾಹಕರಿಗೆ ತಮ್ಮ ಜೀವನ ನಡೆಸೋದೇ ಕಷ್ಟಕರವಾಗಿದ್ದು. ವಿಧಾನಸೌಧ, ಲಾಲ್ಬಾಗ್ನಂತಹ ಸ್ಥಳಗಳ ಮುಂದೆ ಇರುವ ಪೋಟೋಗ್ರಾಫರ್ ಗಳು ಒಂದು ರೂಪಾಯಿ ಗಳಿಸಲು ಹರಸಾಹಸ ಪಡುತ್ತಿದ್ದಾರೆ.
ಹೌದು..ಈಗಂತೂ ದೊಡ್ಡವರಿಂದ ಹಿಡಿದು ಚಿಕ್ಕ ಚಿಕ್ಕಮಕ್ಕಳ ಕೈಯಲ್ಲೂ ಬ್ರ್ಯಾಂಡೆಂಡ್ ಫೋನ್ ಗಳಿವೆ. ಫೋನ್ಗಳಲ್ಲಿ ಒಳ್ಳೆ ಪಿಲ್ಟರ್ ಹಾಗೂ ಕ್ಯಾಮೆರಾ ಕ್ವಾಲಿಟಿ ಇದ್ದು.., ಎಲ್ಲೇ ಹೋದ್ರು ಜನರು ತಮಗೆ ಬೇಕಾದ ರೀತಿಯಲ್ಲಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ. ಇನ್ನೂ… ಫೋಟೋಗ್ರಾಫರ್ಗಳು ಫೋಟೋ ತೆಗೆದುಕೊಡ್ಲಾ ಅಂತಾ ಕೇಳೋಕ್ಕೆ ಹೋದ್ರೂ ಜನ್ರು ಡೋಂಟ್ ಕೇರ್ ಎನ್ನುವಂತೆ ಉತ್ತರ ನೀಡುತ್ತಿದ್ದಾರೆ.. ಇದರಿಂದ ಫೋಟೋಗ್ರಾಫರ್ಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು.., ಫೋನ್ ಬರುವ ಮೊದಲೇ ನಮ್ಮ ವೃತ್ತಿ ಹಾಗೂ ಜೀವನ ಚನ್ನಾಗಿ ನಡಿತ್ತಾ ಇತ್ತು ಅಂತ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :ಪತಿಯ ಕಿಡ್ನಿಯನ್ನು ಮಾರಿ ಪ್ರಿಯಕರನ ಜೊತೆ ಪರಾರಿಯಾದ ಐನಾತಿ ಮಹಿಳೆ
ಇನ್ನೂ.. ಮೊದಲೆಲ್ಲಾ ಫೋಟೋ ಕ್ಲಿಕಿಸಿದರೇ ಜೇಬಿನ ತುಂಬ ಹಣ ತೆಗೆದುಕೊಂಡು ಹೋಗ್ತಾ ಇದ್ವೀ.. ಆದ್ರೆ ಇದೀಗಾ ದಿನಕ್ಕೆ 5 ಜನ ಫೋಟೋ ತೆಗೆಸಿಕೊಳ್ಳೋದು ಕಷ್ಟವಾಗಿದ್ದು.., ಜೊತೆಗೆ ಪ್ರಿಂಟರ್, ಹಾಳೆ,ಬಣ್ಣ ಇದೆಲ್ಲದರ ಬೆಲೆ ಏರಿಕೆಯಾಗಿರುವುದರಿಂದ ಜೀವನಕ್ಕೆ ಏನು ಉಳಿಯೋದೆ ಇಲ್ಲ.. ಈ ವೃತ್ತಿಯನ್ನೇ ನಂಬಿಕೊಂಡು ಬಹಳ ವರ್ಷದಿಂದ ಜೀವನ ಸಾಗಿಸುತ್ತಿದ್ದು…, ಬೇರೆ ವೃತ್ತಿಯ ಬಗ್ಗೆನೂ ಗೊತ್ತಿಲ್ಲದ ಕಾರಣ ಜೀವನ ಸಾಗಿಸೋದೇ ಕಷ್ಟ ಅಂತಿದ್ದಾರೆ ಛಾಯಗ್ರಾಹಕರು.
ಒಟ್ನಲ್ಲಿ… ಟೆಕ್ನಾಲಜಿಗಳಿಂದ ಸಾಕಷ್ಟು ಉಪಯೋಗವಿದ್ರು ಕೂಡ ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ಟೆಕ್ನಾಲಜಿಗಳೇ ಶಾಪವಾಗಿ ಬಿಡುತ್ತವೆ.. ಹೀಗಾಗಿ ಜನರು ಕೂಡ ಇದನ್ನ ಅರಿತು ಫೋಟೋಗ್ರಾಫರ್ಗಳ ಬಳಿ ಫೋಟೋ ಕ್ಲಿಕಿಸಿಕೊಂಡರೆ ಅವರ ಜೀವನವು ಸರಾಗವಾಗಿ ಸಾಗುತ್ತದೆ.


