Saturday, August 23, 2025
Google search engine
HomeUncategorized'ಕೃಷ್ಣಂ ಪ್ರಣಯ ಸಖಿ' ನಾಯಕಿ ಶರಣ್ಯ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ !

‘ಕೃಷ್ಣಂ ಪ್ರಣಯ ಸಖಿ’ ನಾಯಕಿ ಶರಣ್ಯ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ !

ಸಿನಿಮಾ : ಕನ್ನಡದ ಪ್ರತಿಭೆಗಳು ಬೇರೆ ಭಾಷೆಯಲ್ಲಿ ಮಿಂಚುವುದು ಹೊಸದೇನಲ್ಲ. ಅದೇ ರೀತಿ ಇದೀಗ ಈ ಪಟ್ಟಿಗೆ ಕನ್ನಡದ ಮತ್ತೊಬ್ಬ ತಾರೆ ಸೇರ್ಪಡೆಯಾಗಿದ್ದು. ಕನ್ನಡದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಎರಡನೇ ನಾಯಕಿ ಶರಣ್ಯ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಶರಣ್ಯ ಶೆಟ್ಟಿ ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಾಕಷ್ಟು ಸಕ್ರಿಯರಾಗಿರುವ ನಟಿ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರವಾಹಿಯಲ್ಲಿ ಖಳನಟಿಯಾಗಿ ನಟಿಸಿದ್ದ ಶರಣ್ಯ ಸಾಕಷ್ಟು ಜನಮನ್ನಣೆಯನ್ನು ಪಡೆದಿದ್ದರು, ಇದಾದ ನಂತರ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಟಿ 1980, ಪೆಂಟಗನ್, ಹುಟ್ಟುಹಬ್ಬದ ಶುಭಾಷಯಗಳು, ರವಿ ಬೋಪಣ್ಣ, ಸ್ಪೂಕಿ ಕಾಲೇಜ್​ ಈ ರೀತಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇವೆಲ್ಲದರ ನಂತರ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಇವರಿಗೆ ಈ ಸಿನಿಮಾ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟಿತ್ತು.

ಇದನ್ನೂ ಓದಿ :ದೇಶದಲ್ಲಿ 3ನೇ HMP ವೈರಸ್ ಸೋಂಕು​ ಪತ್ತೆ : ಬೆಂಗಳೂರಿನ ನಂತರ ಗುಜರಾತ್​ ಸರದಿ !

ಈ ಸಿನಿಮಾದ ನಂತರ ನಟಿ ಶರಣ್ಯ ಶೆಟ್ಟಿ ಅವರಿಗೆ ಮತ್ತೊಂದು ಅಧ್ಬುತ ಅವಕಾಶ ಹುಡುಕಿಕೊಂಡು ಬಂದಿದ್ದು. ಅವರು ತೆಲಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೌದು.. ಶರಣ್ಯ ತೆಲುಗಿನ ಸ್ಟಾರ್​ ನಟನೊಂದಿಗೆ ಸ್ಕ್ರೀನ್​ ಶೇರ ಮಾಡುತ್ತಿದ್ದು. ಅಧಿಕೃತವಾಗಿ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.

ಸಿನಿಮಾದ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿಗಳು ಬರಬೇಕಾಗಿದ್ದು. ಕನ್ನಡದ ನಟ- ನಟಿಯರು ದೇಶದ ಚಿತ್ರೋದ್ಯಮದಲ್ಲಿ ಮಿಂಚುತ್ತಿರುವುದು ನಿಜಕ್ಕೂ ಹೆಮ್ಮಯ ಸಂಗತಿ ಎನಿಸಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments