ಲಕ್ನೋ: ಉತ್ತರ ಪ್ರದೇಶದ 24 ವರ್ಷದ ಯುವಕನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಮಂಗಳವಾರ ಲಕ್ನೋದ ಹೋಟೆಲ್‌ನಲ್ಲಿ ಮದ್ಯಪಾನ ಮತ್ತು ಅಮಲೇರಿದ ಆಹಾರವನ್ನು ಬಡಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅರ್ಷದ್ ನನ್ನು ಬಂಧಿಸಲಾಗಿದೆ.
ಕೊಲೆ ಮಾಡುವ ಮೊದಲು ಕುಟುಂಬದವರಿಗೆ ನೀಡಿದ ಊಟದಲ್ಲಿ ಅಮಲು ಬರಿಸುವ ಪದಾರ್ಥವನ್ನು ಬೆರೆಸಿ ಕೊಲೆ ಮಾಡಿದ್ದಾರೆ. ಕೆಲವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರೆ. ಮತ್ತು ಕೆಲವರನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ದೊರೆತಿದೆ.

ಇದನ್ನೂ ಓದಿ : ಕೈ ಕೊಟ್ಟ ಬ್ಯೂಟಿಪಾರ್ಲರ್ ಉದ್ಯಮ : ಕಾರಿನ ಸಮೇತ ನದಿಗೆ ಬಿದ್ದು ವ್ಯಕ್ತಿ ಸಾ*ವು !
ಕೊಲೆ ಮಾಡಿದ ನಂತರ ವಿಡಿಯೋ ಮಾಡಿದ ಭೂಪ !
ಕೊಲೆ ಮಾಡಿದ ನಂತರ ಅರ್ಷದ ವಿಡಿಯೋ ಮಾಡಿದ್ದು ಅದರಲ್ಲಿ ಮಾತನಾಡಿರುವ ಅರ್ಷದ್ ‘ ತನ್ನ ನೆರೆಹೊರೆಯವರು ಆಗ್ರಾದಲ್ಲಿರುವ ಆಸ್ತಿಯನ್ನು ಕಬಳಿಸಕು ಪ್ರಯತ್ನಿಸುತ್ತಿದ್ದಾರೆ ಹಾಗೂ ನನ್ನ ಸಹೋದರಿಯರನ್ನು ಹೈದರಾಬಾದ್ನಲ್ಲಿ ಮಾರಾಟ ಮಾಡಲು ಯೋಚಿಸಿದ್ದಾರೆ. ಇದಕ್ಕೆ ಹೆದರಿ ತನ್ನ ತಾಯಿ ಮತ್ತು ಸಹೋದರಿಯರನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ.
ಈ ಕೊಲೆ ಪ್ರಕರಣದಲ್ಲಿ ಅರ್ಷದ್ ತಂದೆಯು ಅಪರಾದಿ ಇರಬಹುದು ಎಂದು ಲಖ್ನೋ ಪೊಲೀಸ್ ನಿದೇಶಕಿ ರವೀನ ತ್ಯಾಗಿ ತಿಳಿಸಿದ್ದು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


