ಹೊಸ ವರ್ಷಕ್ಕೆ 1.22 ಲಕ್ಷ ಕಾಂಡೋಮ್​ ಮಾರಾಟ : ಚಾಕ್​ಲೇಟ್​ ಪ್ಲೇವರ್​ಗೆ ಹೆಚ್ಚು ಬೇಡಿಕೆ ಎಂದ ಬ್ಲಿಂಕ್​ಇಟ್​ !

2024ಕ್ಕೆ ಗುಡ್​ಬಾಯ್​ ಹೇಳಿ 2025ನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಇದರ ನಡುವೆ ವರ್ಷದ ಕೊನೆ ದಿನ ಮಾರಾಟವಾದ ಆಲ್ಕೋಹಾಲ್​ ಎಷ್ಟು, ಪೊಲೀಸರು ದಾಖಲಿಸಿದ ಡ್ರಿಂಕ್​ ಆ್ಯಂಡ್​ ಡ್ರೈವ್​ ಕೇಸ್​​ಗಳು ಎಷ್ಟು ಎಂಬುದರ ಕುರಿತು ಅನೇಕ ಅಂಕಿ ಅಂಶಗಳು ಹೊರಬರುತ್ತಿವೆ. ಇದರ ನಡುವೆ ಬ್ಲಿಂಕ್​ಇಟ್​ ಕಂಪನಿಯ CEO ಅಲ್ಬೀಂದರ್​ ದಿಂಡ್ಸಾ ಬ್ಲಿಂಕ್​ನಲ್ಲಿ ವರ್ಷದ ಕೊನೆ ದಿನ ತಮ್ಮ ಅಂಗಡಿಯಿಂದ ಮಾರಾಟವಾದ ವಸ್ತುಗಳ ಅಂಕಿ ಅಂಶವನ್ನು ಬಿಡುಗಡೆ ಮಾಡಿದ್ದು. ಇದರಲ್ಲಿ ದಾಖಲೆ ಪ್ರಮಾಣದಲ್ಲಿ ಕಾಂಡೋಮ್​ ಮಾರಾಟವಾಗಿದೆ ಎಂದು ಮಾಹಿತಿ ದೊರೆತಿದೆ.

ಭಾರತದಲ್ಲಿ ವ್ಯಾಪಕವಾಗಿ ಬಳಸುವ ಇ-ಕಾರ್ಮಸ್​​ ಫ್ಲಾಟ್​ಪಾರ್ಮ್ ಬ್ಲಿಂಕ್​ಇಟ್​ನಲ್ಲಿ ವರ್ಷದ ಕೊನೆಯ ದಿನವಾದ ನಿನ್ನೆ (ಡಿ.31) ಕಾಂಡೋಮ್​, ನಿಂಬೆಹಣ್ಣು, ENO, ಐಸ್​ಕ್ಯೂಬ್​, ಮಿನರಲ್​ ವಾಟರ್​, ಚಿಪ್ಸ್​, ತಿಂಡಿಗಳು ಯಾವ ಪ್ರಮಾಣದಲ್ಲಿ ಮಾರಾಟವಾಗಿದೆ ಎಂಬುದನ್ನು ಸಿಇಓ. ಅಲ್ಬೀಂದರ್​ ದಿಂಡ್ಸಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಕನ್ನಡ ಚಿತ್ರರಂಗಕ್ಕೆ ಜೂನಿಯರ್​ ಕಿಚ್ಚನ ಗ್ರ್ಯಾಂಡ್​ ಎಂಟ್ರಿ : ಅಳಿಯನಿಗೆ ಬಂಡವಾಳ ಹೂಡಿದ ಕಿಚ್ಚ !

ಡಿಸೆಂಬರ್ 31 ರಂದು, ರಾತ್ರಿ 10 ಗಂಟೆ ವೇಳೆಗೆ ಸುಮಾರು 1,22,356 ಕಾಂಡೋಮ್​ಗಳು ಮಾರಾಟವಾಗಿದೆ ಎಂದು ಬ್ಲಿಂಕ್​ ಇಟ್​ ಮಾಹಿತಿ ಹಂಚಿಕೊಂಡಿದ್ದು. ಯಾವ ಫ್ಲೇವರ್ ಕಾಂಡೋಮ್​ಗಳು ಎಷ್ಟು ಪ್ರಮಾಣದಲ್ಲಿ ಮಾರಟವಾಗಿದೆ ಎಂಬುದನ್ನು ಹಂಚಿಕೊಂಡಿದೆ. ಅದರ ಜೊತೆಗೆ ಸುಮಾರು 2,34,512 ಪ್ಯಾಕೆಟ್​ ಆಲೂ ಭುಜಿಯಾ, 45,531 ಕ್ಯಾನ್ ಟಾನಿಕ್ ವಾಟರ್, 6,834 ಪ್ಯಾಕೆಟ್ ಐಸ್ ಕ್ಯೂಬ್‌ಗಳು, 1003 ಲಿಪ್‌ಸ್ಟಿಕ್‌ಗಳು ಮತ್ತು 762 ಲೈಟರ್‌ಗಳು ಮಾರಾಟವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

 

RELATED ARTICLES

Related Articles

TRENDING ARTICLES