ಕ್ಯಾನ್ಸರ್​ನಿಂದ ಗುಣಮುಖರಾದ ಶಿವಣ್ಣ : ವಿಡಿಯೋ ಸಂದೇಶ ಕಳಿಸಿ ಧನ್ಯವಾದ ಅರ್ಪಿಸಿದ ಶಿವಣ್ಣ ದಂಪತಿ

ನ್ಯೂಯಾರ್ಕ್​ : ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ಯಾನ್ಸರ್​ನಂಥ ಮಾರಕ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಇದರ ಕುರಿತು ವಿಡಿಯೋ ಹಂಚಿಕೊಂಡಿರುವ ಶಿವಣ್ಣ. ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿ. ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.

ಹೌದು ಕಳೆದ ಎರಡು ವಾರಗಳ ಹಿಂದೆ ಚಿಕಿತ್ಸೆಗೆ ಎಂದು ಅಮೇರಿಕಾದ ಮಿಯಾಮಿಗೆ ಹೋಗಿದ್ದ ಶಿವರಾಜ್​ ಕುಮಾರ್​. ಡಿಸೆಂಬರ್​ 24ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಸಫಲವಾಗಿದೆ ಎಂದು ಮಾಹಿತಿಯೂ ಕೂಡ ಬಂದಿತ್ತು. ಆದರೆ ಶಿವಣ್ಣರ ಅಭಿಮಾನಿಗಳಿಗೆ ಅವರನ್ನು ನೋಡುವ ಸೌಭಾಗ್ಯ ದೊರೆತಿರಲಿಲ್ಲ.

ಇದನ್ನೂ ಓದಿ :ಹೊಸವರ್ಷದ ಪಾರ್ಟಿ ಮುಗಿಸಿ ಹಿಂತಿರುಗುವ ವೇಳೆ ಅಪಘಾತ : ಇಬ್ಬರ ದುರ್ಮರಣ !

ಆದರೆ ಇದರ ಕುರಿತು ಇಂದು ಶಿವರಾಜ್​ಕುಮಾರ್​ ತಮ್ಮ ಎಕ್ಷ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು. ಇದರಲ್ಲಿ ಮಾತನಾಡಿರುವ ಶಿವಣ್ಣ ಮತ್ತು ಅವರ ಪತ್ನಿ ಗೀತಾ ಶಿವರಾಜ್​ಕುಮಾರ್​ ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.

ಕ್ಯಾನ್ಸರ್​ನಿಂದ ಫ್ರೀ ಆದ ಶಿವಣ್ಣ !

ಹೌದು ಇದರ ಬಗ್ಗೆ ಮಾತನಾಡಿದರು ಗೀತಾ ಶಿವರಾಜ್​ ಕುಮಾರ್​ ‘ ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ ನಂತರ ಮಾಡಿರುವ ಎಲ್ಲಾ ಪರೀಕ್ಷೆಗಳು ರಿಪೋಟ್​ ನೆಗೆಟಿವ್​ ಬಂದಿದ್ದು. ಇದೀಗ ಶಿವಣ್ಣ ಕ್ಯಾನ್ಸರ್​ ಎಂಬ ಮಾರಕ ಖಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : 308 ಕೋಟಿ ಮೌಲ್ಯದ ಮಧ್ಯ ಮಾರಾಟ : 513 ಡ್ರಿಂಕ್​ ಆ್ಯಂಡ್​ ಡ್ರೈವ್​ ಕೇಸ್​ ದಾಖಲು !

ಶಿವಣ್ಣ ಇದರ ಕುರಿತು ಮಾತನಾಡಿದ್ದು ನನಗಾಗಿ ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗು  ಧನ್ಯವಾದವನ್ನು ಅರ್ಪಿಸಿದ್ದು. ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಅವರು ಕ್ಯಾನ್ಸರ್​ ಟೈಮ್​ನಲ್ಲಿ ಕಿಮೋ ಥೆರಪಿ ಸಮಯದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದಾರೆ.

ಮಾರ್ಚ್​ ಒಳಗೆ ಪೂರ್ಣಪ್ರಮಾಣದಲ್ಲಿ ಗುಣಮುಖರಾಗಲಿದ್ದು. ಮೊದಲಿನಂತೆ ಚಿತ್ರೀಕರಣದಲ್ಲಿ ಭಾಗಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ

RELATED ARTICLES

Related Articles

TRENDING ARTICLES