ಕೌಟುಂಬಿಕ ಕಲಹಕ್ಕೆ ಬೇಸತ್ತ ಇಂಜಿನಿಯರ್​ ಆತ್ಮಹತ್ಯೆಗೆ ಶರಣು !

ಹಾಸನ : ಕೌಟುಂಬಿಕ ಕಲಹ ಹಿನ್ನಲೆ ಇಂಜಿನಿಯರ್​ ಓರ್ವ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಮೃತನನ್ನು 35 ವರ್ಷದ ಪ್ರಮೋದ್​ ಎಂದು ಗುರುತಿಸಲಾಗಿದೆ.

ಹಾಸನ ತಾಲ್ಲೂಕಿನ, ಇಂದಿರಾನಗರದಲ್ಲಿ ವಾಸವಾಗಿದ್ದ ಪ್ರಮೋದ್​ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಆದರೆ ಕಳೆದ ಡಿಸೆಂಬರ್​ 29ರಂದು ಸಂಜೆ ಮನೆಯಲ್ಲಿ ಪೋನ್​ ಬಿಟ್ಟು ಪ್ರಮೋದ್​ ಹೊರಗೆ ತೆರಳಿದ್ದನು. ಪ್ರಮೋದ್​ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು ಆದರೆ ಪ್ರಮೋದ್ ಸಿಗದಿದ್ದ ಕಾರಣ ಹಾಸನದ ಕೆ.ಆರ್​ ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ : 308 ಕೋಟಿ ಮೌಲ್ಯದ ಮಧ್ಯ ಮಾರಾಟ : 513 ಡ್ರಿಂಕ್​ ಆ್ಯಂಡ್​ ಡ್ರೈವ್​ ಕೇಸ್​ ದಾಖಲು !

ಮಿಸ್ಸಿಂಗ್ ಕಂಪ್ಲೇಂಟ್​ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಮೋದ್​ಗಾಗಿ ಹುಡುಕಾಟ ಆರಂಭಿಸಿದ್ದರು. ಹಾಸನದ, ಗೊರೂರು ಶೆಟ್ಟಿಹಳ್ಳಿ ಬಳಿಯ ಹೇಮಾವತಿ ನದಿಯ ಬಳಿಯಲ್ಲಿ ಪ್ರಮೋದ್​ನ ಟಿವಿಎಸ್​ ಜುಪಿಟರ್​ ವಾಹನ ಪತ್ತೆಯಾಗಿತ್ತು. ಈ ಗಾಡಿಯನ್ನು ಪರಿಶೀಲಿಸಿದ್ದ ಸ್ಥಳೀಯರಿಗೆ ಗಾಡಿಯ ಡಿಕ್ಕಿಯಲ್ಲಿ ಪ್ರಮೋದ್​ನ ಪಾಸ್​ಬುಕ್ ಪತ್ತೆಯಾಗಿತ್ತು. ಪಾಸ್​ಬುಕ್​ ಪರಿಶೀಲನೆ ನಡೆಸಿದ ಸ್ಥಳೀಯರು ಪೋಷಕರು ಸ್ಥಳೀಯರಿಗೆ ಪೋನ್​ ಮಾಡಿ ತಿಳಿಸಿದ್ದರು.

ಇದರ ಬೆನ್ನಲ್ಲೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಡಿಸೆಂಬರ್​ 30ರಂದು ಹೇಮಾವತಿ ನದಿಯಲ್ಲಿ ಪ್ರಮೋದ್​ಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು ನದಿಯಲ್ಲಿ ಪ್ರಮೋದ್ ಶವ ತೇಳುತ್ತಿರುವುದನ್ನು ಕಂಡ ಪೊಲೀಸರು. ಶವವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಗೊರೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ನಡೆದಿದೆ.

 

RELATED ARTICLES

Related Articles

TRENDING ARTICLES