308 ಕೋಟಿ ಮೌಲ್ಯದ ಮಧ್ಯ ಮಾರಾಟ : 513 ಡ್ರಿಂಕ್​ ಆ್ಯಂಡ್​ ಡ್ರೈವ್​ ಕೇಸ್​ ದಾಖಲು !

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ನಿನ್ನೆ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ. ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ 250 ಕೋಟಿ ರೂ. ಮದ್ಯ ಮಾರಾಟದ ಟಾರ್ಗೆಟ್ ಇಟ್ಟುಕೊಂಡಿತ್ತು.

ಐಎಂಎಲ್- 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಹರಿದುಬಂದಿದೆ. ಒಟ್ಟಾರೆ 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯವಾಗಿದೆ.

ಡಿಸೆಂಬರ್​ 27 ಶುಕ್ರವಾರದಂದು ದಾಖಲೆಯ ಪ್ರಮಾಣದ ಮಧ್ಯ ಮಾರಾಟವಾಗಿದ್ದು. ಸುಮಾರು 401.58 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಟವಾಗಿತ್ತು.

ಇದನ್ನೂ ಓದಿ : ನ್ಯೂ ಇಯರ್​ ಸೆಲಬ್ರೇಶನ್​ ಮುಗಿಸಿ ಹೋಗುವಾಗ ಅಪಘಾತ : ಇಬ್ಬರು ಸ್ಥಳದಲ್ಲೆ ಸಾ*ವು !

ನೆಶೆಯಲ್ಲಿ ವಾಹನ ಚಾಲನೆ ಮಾಡಿದವರಿಗೆ ದಂಡ ವಿಧಿಸಿದ ಪೊಲೀಸರು !

ಹೊಸ ವರ್ಷದ ಪಾರ್ಟಿ ಮೂಡ್​ನಲ್ಲಿ ಕುಡಿದು ವಾಹನ ಚಾಲನ ಮಾಡುತ್ತಿದ್ದವರ ರಾತ್ರಿ ಪೊಲೀಸರು ಶಾಕ್​ ನೀಡಿದ್ದು. ಒಂದೆ ರಾತ್ರಿಯಲ್ಲಿ ಸುಮಾರು 513 ಕೋಟಿ ಡ್ರಿಂಕ್ ಆ್ಯಂಡ್ ಡ್ರೈವ್​ ಪ್ರಕರಣಗಳು ದಾಖಲಾಗಿವೆ. ನೆನ್ನೆ ಒಂದೆ ರಾತ್ರಿಯಲ್ಲಿ 28,127 ವಾಹನಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದವರಿಂದ ದಂಡ ವಸೂಲಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES