ಸಿನಿ ಅಖಾಡಕ್ಕೆ ದುಮುಕಿದ ದಾಸ : ಡೆವಿಲ್​ ಸಿನಿಮಾದ ಡಬ್ಬಿಂಗ್​ ಶುರು !

ಬೆಂಗಳೂರು : ನಟ ದರ್ಶನ್​ ಮತ್ತೆ ಸಿನಿ ಅಖಾಡಕ್ಕೆ ದುಮುಕಿದ್ದಾರೆ. 6 ತಿಂಗಳ ಸೆರೆಮನೆ ವಾಸವನ್ನು ಅನುಭವಿಸಿ ಹೊರಬಂದಿರುವ ದಾಸ ಇಂದಿನಿಂದ ತಮ್ಮ ಡೆವಿಲ್​ ಸಿನಿಮಾದ ಡಬ್ಬಿಂಗ್​ ಕೆಲಸವನ್ನು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ ಎಂದ ಯಶ್​ : ಕಳೆದ ವರ್ಷದ ದುರ್ಘಟನೆಯನ್ನು ಮರೆತಿಲ್ಲವೆ ರಾಕಿಭಾಯ್​

ಹೌದು.. ನಟ ದರ್ಶನ್​ ಜೀವನದಲ್ಲಿ ಹೊಸ ವರ್ಷ, ಹೊಷ ಹುರುಪನ್ನು ತಂದುಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​, ಹೈಕೋರ್ಟ್​ನಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಕಾರಣದಿಂದ ಈಗಲೆ ಶೂಟಿಂಗ್​ನಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ.

ಆದರೆ ಇಂದಿನಿಂದ ದರ್ಶನ್​ ನಟನೆಯ ಡೆವಿಲ್​ ಸಿನಿಮಾದ ಕೆಲಸಗಳಿಗೆ ಕಿಕ್​ ಸ್ಟಾರ್ಟ್​ ದೊರೆಯಲಿದ್ದು. ಈಗಾಗಲೇ ಶೂಟಿಂಗ್ ಮುಗಿದಿರುವ ಭಾಗಗಳಿಗೆ ಡಬ್ಬಿಂಗ್​ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES