Tuesday, September 2, 2025
HomeUncategorizedಜಾರ್ಖಂಡ್​ನಲ್ಲಿ ಮತ್ತೆ ಅಧಿಕಾರ ಹಿಡಿದ ಹೇಮಂತ್​ ಸೊರೆನ್ ನೇತೃತ್ವದ ಸರ್ಕಾರ

ಜಾರ್ಖಂಡ್​ನಲ್ಲಿ ಮತ್ತೆ ಅಧಿಕಾರ ಹಿಡಿದ ಹೇಮಂತ್​ ಸೊರೆನ್ ನೇತೃತ್ವದ ಸರ್ಕಾರ

ರಾಂಚಿ : ಜಾರ್ಖಂಡ್​ನಲ್ಲಿಆಡಳಿತರೂಡ ಜಾರ್ಖಂಡ್​ ಮುಕ್ತಿ ಮೋರ್ಚ(JMM) ಪಕ್ಷ ಮತ್ತೆ ಅಧಿಕಾರ ಹಿಡಿದಿದ್ದು. ಹಲವಾರು ಹಗರಣಗಳ ಸರಮಾಲೆ ಹೊತ್ತಿದ್ದ ಜೆಎಂಎಂ ಪಕ್ಷವನ್ನು ಜನರು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಚುನಾವಣಾಪೂರ್ವ ಸಮೀಕ್ಷೆಗಳು ಕೂಡ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಎಲ್ಲರ ನಿರೀಕ್ಷೆಯನ್ನು ಮೀರಿ ಜೆಎಂಎಂ ಮತ್ತೆ ಅಧಿಕಾರಕ್ಕೆ ಬಂದಿದೆ.

ಬಿಜೆಪಿ ಸೋಲಲು ಕಾರಣಗಳೇನು ಎಂದು ಇದೀಗ ರಾಜಕೀಯ ವಿಶ್ಲೇಷಕರು ವಿಶ್ಲೇಷನೆ ಮಾಡುತ್ತಿದ್ದು.  ಬಿಜೆಪಿ ಚುನಾವಣೆಯಲ್ಲಿ ಸೋಲಲು ಅತಿ ದೊಡ್ಡ ಕಾರಣ ಬಿಜೆಪಿ ಮುಖ್ಯಮಂತ್ರಿಯನ್ನು ಘೋಷಿಸದಿರುವುದು ಎಂದು ಹೇಳಲಾಗುತ್ತಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ ಅಂದರೆ ಜೆಎಂಎಂ ಪಕ್ಷ ಸುಮಾರು  57 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿ 233 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 14 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಜಾರ್ಖಂಡ್‌ನಲ್ಲಿ ಮತ್ತೆ ಜೆಎಂಎಂ ಸರ್ಕಾರ ರಚಸಲಿರುವುದು ಬಹುತೇಕ ಖಚಿತವಾಗಿದೆ. ಸಾಕಷ್ಟು ಆರೋಪಗಳ ಮಧ್ಯೆಯೂ ಹೇಮಂತ್ ಸೊರೇನ್ ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments