ಹೆಲ್ಮೆಟ್​​ ಧರಿಸಿಲ್ಲವೆಂದು ಲಾರಿ ಚಾಲಕನಿಗೆ ದಂಡ ವಿಧಿಸಿದ ಪೋಲಿಸರು

ರಾಯಚೂರು : ಪೋಲಿಸರು ಕೆಲವೊಮ್ಮೆ ಮಾಡುವ ತಪ್ಪಿನಿಂದ ಜನರ ನಡುವೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಅದೇ ರೀತಿ ರಾಯಚೂರಿನಲ್ಲಿ ಪೋಲಿಸರು ಲಾರಿ ಚಾಲಕನಿಗೆ ಹೆಲ್ಮೆಟ್​ ಧರಿಸಿಲ್ಲ ಎಂದು 500 ರೂ ದಂಡ ಕಟ್ಟಿ ಎಂದು ಮೆಸಜ್​ ಕಳುಹಿಸಿ ಚಾಲಾಕನ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ರಾಯಚೂರು ಮೂಲದ ಭತ್ತ ಕಟಾವು ಮಷಿನ್ ಹೊತ್ತೊಯ್ಯುತ್ತಿದ್ದ ಲಾರಿಗೆ ಈ ಮೆಸೆಜ್​ ಬಂದಿದ್ದು.
ಶರಣಗೌಡ ಪಿ ಮಾಲಿಪಾಟೀಲ್ ಎಂಬ ಲಾರಿ ಮಾಲೀಕನಿಗೆ ದಂಡ ಕಟ್ಟುವಂತೆ ಮಾಹಿತಿ ನೀಡಲಾಗಿದೆ.
ಚಾಲಕನ ಮೊಬೈಲ್​​ಗೆ ಇದರ ಕುರಿತಂತೆ ಸಂದೇಶ ಬಂದಿದ್ದು. ಈ ಸಂದೇಶದಲ್ಲಿ ವಾಹನ ಸಂಖ್ಯೆ : KA 64, 5999. ದಿ.07.11.24 ರಂದು ಕಲ್ಪತರು ಹುಣುಸೂರು, ಕೋರ್ಟ ರೋಡಿನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ್ದೀರಿ. ಹಾಗಾಗಿ 500 ದಂಡ ಕಟ್ಟಿ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಿ ಎಂದು ಸಂದೇಶ ರವಾನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES