ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು.
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆಂಗ್ಲರು ಭಾರತಕ್ಕೆ ಆರಂಭದಲ್ಲೇ ಶಾಕ್ ನೀಡಿದರು.
ಕೇವಲ 33 ರನ್ ಕಲೆ ಹಾಕುವಷ್ಟರಲ್ಲೇ ಭಾರತ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟರ್ ಜೈಸ್ವಾಲ್ 10, ಶುಭ್ಮನ್ ಗಿಲ್ ಶೂನ್ಯ (0) ಹಾಗೂ ರಜತ್ ಪಟೀದಾರ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಸಂಕಷ್ಟದಲ್ಲಿದ್ದ ಭಾರತಕ್ಕೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಸರೆಯಾದರು. ರವೀಂದ್ರ ಜಡೇಜಾ ಜೊತೆ ಸೇರಿಕೊಂಡು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದರು. 174 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನೊಂದಿಗೆ ಶತಕ (111*) ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 11ನೇ ಶತಕ ದಾಖಲಿಸಿದರು.
ಜಡ್ಡು ಬೊಂಬಾಟ್ ಅರ್ಧಶತಕ
ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಮೂರನೇ ಪಂದ್ಯದಲ್ಲಿ ಬೊಂಬಾಟ್ ಕಂಬ್ಯಾಕ್ ಮಾಡಿದರು. ಹಿಟ್ ಮ್ಯಾನ್ ಜೊತೆಗೂಡಿ ಆಂಗ್ಲರನ್ನು ಬಿಟ್ಟು ಬಿಡದೇ ಕಾಡಿದರು. 138 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ ಅರ್ಧಶತಕ (70*) ಸಿಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 21ನೇ ಅರ್ಧಶತಕ ದಾಖಲಿಸಿದರು.
DO NOT MISS
? That Moment when captain @ImRo45 brought up a fine ? ? ?
Follow the match ▶️ https://t.co/FM0hVG5pje#TeamIndia | #INDvENG | @IDFCFIRSTBank pic.twitter.com/MtK2wm89CQ
— BCCI (@BCCI) February 15, 2024



В этой статье представлен занимательный и актуальный контент, который заставит вас задуматься. Мы обсуждаем насущные вопросы и проблемы, а также освещаем истории, которые вдохновляют на действия и изменения. Узнайте, что стоит за событиями нашего времени!
Подробнее тут – https://vivod-iz-zapoya-1.ru/