ಮಂಜುನಾಥನ ಮೇಲೆ ಆಣೆ, ನಾನು ಬೆದರಿಕೆ ಹಾಕಿಲ್ಲ : ಪದ್ಮರಾಜ್

ಬೆಂಗಳೂರು : ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನಲ್ಲ. ಮಂಜುನಾಥನ ಮೇಲೆ ಆಣೆ, ಶಾಸಕ ಗೋಪಾಲಯ್ಯರಿಗೆ ನಾನು ಬೆದರಿಕೆ ಹಾಕಿಲ್ಲ. ಸತ್ಯಕ್ಕೆ ದೂರುವಾದ ಮಾತು. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಹೇಳಿದರು.

ಶಾಸಕ ಗೋಪಾಲಯ್ಯರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದ ಪದ್ಮರಾಜ್ ಅವರು ಜಾಮೀನು ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಗುತ್ತಿಗೆ ಕೊಡಿಸುವ ವಿಚಾರಕ್ಕೆ15 ಲಕ್ಷ ಹಣ ಕೊಟ್ಟಿದ್ದೆ. ಕೆಲಸ ಕೊಡಿಸಲಿಲ್ಲ, ಅದಕ್ಕೆ ಕಾಲ್ ಮಾಡಿದ್ದೆ. ಆಗ ಒಂದಷ್ಟು ಮಾತುಗಳಾದವು. ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ ಬಂದ್ಮೇಲೆ ಹಣ ಮರಳಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.

15 ಲಕ್ಷ ಹಣ ಕೇಳಲು ಕರೆ ಮಾಡಿದ್ದೆ

ನಾನು ಯಾವುದೇ ರೀತಿಯ ಜೀವ ಬೆದರಿಕೆ ಹಾಕಿಲ್ಲ. ಯಾವುದು ಸತ್ಯ ಎಂದು ಮಂಜುನಾಥ ನೋಡಿಕೊಳ್ಳುತ್ತಾನೆ. ನಾನು ನೀಡಿದ್ದ 15 ಲಕ್ಷ ಹಣ ಕೇಳಲು ಕರೆ ಮಾಡಿದ್ದೆ. ಈ ವೇಳೆ ಕೋಪದಿಂದ ಅವರು ಮಾತನಾಡಿದರು. ಹೀಗಾಗಿ, ನಾನು ಮಾತನಾಡಿದ್ದೇನೆ ಅಷ್ಟೇ. ನನಗೆ ಕೆಲಸ ಕೊಡಿಸುವುದಕ್ಕೆ 15 ಲಕ್ಷ ಹಣ ನೀಡಿದ್ದೆ, ಅದನ್ನು ಕೇಳಿದ್ದೇನೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES