ಅರ್ಧಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಯಶಸ್ವಿ ಜೈಸ್ವಾಲ್

ಬೆಂಗಳೂರು : ಇಂಗ್ಲೆಂಡ್​ ವಿರುದ್ದದ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಪೂರೈಸಿದರು. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು.

ವಿಶಾಖಪಟ್ಟಣಂ ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಮಾಡುತ್ತಿದೆ. ಆದರೆ, ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದುಕೊಂಡಿದೆ.

ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಆಸರೆಯಾಗಿದ್ದಾರೆ. ರೋಹಿತ್ ಜೊತೆ ಮೊದಲ ವಿಕೆಟ್​ಗೆ 40 ರನ್​ಗಳ ಜೊತೆಯಾಟ ಆಡಿದರು. ಬಳಿಕ, ಗಿಲ್ ಜೊತೆಗೂಡಿ 49 ರನ್​ಗಳ ಕಾಣಿಕೆ ನೀಡಿದರು. ಸದ್ಯ ಶ್ರೇಯಸ್ ಅಯ್ಯರ್ ಜೊತೆಗೂಡಿ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಮೂರನೇ ಅರ್ಧಶತಕ

ರೋಹಿತ್ 14 ರನ್ ಗಳಿಸಿದ್ದಾಗ ಶೋಯೆಜ್ ಬಶೀರ್ ಬೌಲಿಂಗ್​ನಲ್ಲಿ ಒಲ್ಲಿ ಪೋಪ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶುಭ್​ಮನ್ ಗಿಲ್ 34 ರನ್​ ಗಳಿಸಿದ್ದಾಗ ಜೇಮ್ಸ್ ಅ್ಯಂಡರ್ಸನ್ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು. ಎರಡು ವಿಕೆಟ್ ಬಿದ್ದರೂ ಎದೆಗುಂದದೆ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ 89 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಅವರ ಮೂರನೇ ಅರ್ಧಶತಕವಾಗಿದೆ.

ಅಯ್ಯರ್ ಜೊತೆ 74* ಜೊತೆಯಾಟ

ಭೋಜನ ವಿರಾಮದ ಬಳಿಕ ಸೆಕೆಂಡ್ ಸೆಷನ್ ಆರಂಭವಾಗಿದೆ. ಸದ್ಯ ಯಶಸ್ವಿ ಜೈಸ್ವಾಲ್ 2 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 93* ಹಾಗೂ ಶ್ರೇಯಸ್ ಅಯ್ಯರ್ ಅಜೇಯ 22* ರನ್ ಗಳಿಸಿ ಆಡುತ್ತಿದ್ದಾರೆ. 47 ಓವರ್​ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಭಾರತ 163 ರನ್​ ಪೇರಿಸಿದೆ.

RELATED ARTICLES

Related Articles

TRENDING ARTICLES