ವರ್ಷದ ಮೊದಲ ದಿನವೇ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು:  ಹೊಸ ವರುಷವೆಂದರೆ ಹೊಸ ಕನಸುಗಳನ್ನು ಹೊತ್ತಿ ಮುಂದಿನ ಬದುಕಿನ ವರ್ಷ ಪ್ರಯಾಣ ಸಾಗುವ ದಿನ. ಆದರೆ‌ ಇಲ್ಲೊಬ್ಬಳು ಹುಡುಗಿ ತನ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ತನ್ನ ಬದುಕಿನ ಪ್ರಯಾಣವನ್ನ ಮಗಿಸಿದ್ಧಾಳೆ.

ಹೌದು, ಬೆಂಗಳೂರಿನ ಸುಧಾಮ ನಗರದಲ್ಲಿ ಈ ಘಟನೆ ನಡೆದಿದ್ದು, ವರ್ಷಿಣಿ (21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಈಕೆ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಯುವತಿ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಜೀವನದಲ್ಲಿ ನೊಂದು ಈ ಕೃತ್ಯಕ್ಕೆ ಮುಂದಾಗಿದ್ದಳು ಎಂದು ಹೇಳಲಾಗಿದೆ. ಆದರೆ, ನಿಜವಾದ ಕಾರಣ ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ:Double Murder : ಹೊಸ ವರ್ಷದ ಮೊದಲ ದಿನವೇ ಹರಿಯಿತು ನೆತ್ತರು ; ಕ್ಷುಲ್ಲಕ ಕಾರಣಕ್ಕೆ..

ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಕೆಯ ಮನೆಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆಯಾ ಎನ್ನುವುದು ತಿಳಿದುಬಂದಿಲ್ಲ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES