ಮೌಲ್ವಿಗಳಿಗೆ ಅನುದಾನ ಕೊಡಲು ಜನರ ಮೇಲೆ ಟ್ಯಾಕ್ಸ್ ಹೊರೆ: ಆರ್ ಅಶೋಕ್

ಬೆಳಗಾವಿ: ಮೌಲ್ವಿಗಳಿಗೆ ಅನುದಾನ ಕೊಡಲು ಜನರ ಮೇಲೆ ಟ್ಯಾಕ್ಸ್ ಹೊರೆ ಹಾಕುವ ಅಧಿವೇಶನ ಇದು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕೆ ಮಾಡಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಹಿತ ಕಡೆಗಣಿಸಿ ಜನರ ಮೇಲೆ ಟ್ಯಾಕ್ಸ್ ಹಾಕುವ ಸರ್ಕಾರ ಇದು. ಎಲ್ಲದಕ್ಕೂ ತೆರಿಗೆ ಹೇರುವ ಸರ್ಕಾರ ಇದಾಗಿದೆ. ಸ್ಟಾಂಪ್ ಡ್ಯೂಟಿ ಹೆಚ್ಚಳ‌ ಮಾಡಿ ಜನರಿಗೆ ಟ್ಯಾಕ್ಸ್ ಹೊರೆ ಹಾಕಿದೆ ಎಂದು ಕಿಡಿಕಾರಿದ್ದಾರೆ.

 ನೀವು ಈ ಓದಿದ್ದೀರಾ? ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ಪಾಪಿ ಗಂಡ

ರೈತರ ಸಮಸ್ಯೆ ಕಡೆ ಇವರಿಗೆ ಗಮನ ಇಲ್ಲ. 25 ಸಾವಿರ ರೂ. ರೈತರಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದ್ದೇವೆ. ಸರ್ಕಾರದ ತೆರಿಗೆ ಹೆಚ್ಚಳ, ಬರ ನಿರ್ಲಕ್ಷ್ಯ, ಉತ್ತರ ಕರ್ನಾಟಕದ ನಿರ್ಲಕ್ಷ್ಯ ವಿರುದ್ಧ ಬುಧವಾರ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಕಂದಾಯ ತೆರಿಗೆ ಹೆಚ್ಚಿಸಿರೋದು ಮೌಲ್ವಿಗಳಿಗೆ ಹಣ ಕೊಡಲು.ಇದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

 

 

 

RELATED ARTICLES

Related Articles

TRENDING ARTICLES