ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಎಡವಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯ ತುಂಬಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್-2023 ಫೈನಲ್‌ನಲ್ಲಿ ಗೆಲುವಿನ ಸನ್ನಿಹದಲ್ಲಿ ಎಡವಿದ ಕಾರಣ, ದೇಶವು ಇಂದು ಮತ್ತು ಯಾವಾಗಲೂ” ತಂಡದೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ.
ಪ್ರೀತಿಯ ಟೀಂ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ (ದೃಢನಿರ್ಧಾರ) ಗಮನ ಸೆಳೆಯಿತು. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ದೇಶಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ ಭಾರತದ ವಿರುದ್ಧ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಟ್ರಾವಿಸ್ ಹೆಡ್ ಆಟಕ್ಕೆ ಶ್ಲಾಘನೆ
‘ಫೈನಲ್ ಪಂದ್ಯದಲ್ಲಿ ಅಮೋಘ ಗೆಲುವನೊಂದಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾಗೆ ಅಭಿನಂದನೆಗಳು. ಇಂದಿನ ಪಂದ್ಯಾವಳಿಯ ಮೂಲಕ ನಿಮ್ಮದು ಶ್ಲಾಘನೀಯ ಪ್ರದರ್ಶನವಾಗಿತ್ತು, ಇದು ಅದ್ಭುತ ವಿಜಯೋತ್ಸವದಲ್ಲಿ ಕೊನೆಗೊಂಡಿತು. ಫೈನಲ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಟ್ರಾವಿಸ್ ಹೆಡ್‌ರಿಗೆ ಅಭಿನಂದನೆಗಳು’ ಎಂದು ಶುಭಕೋರಿದ್ದಾರೆ.
Dear Team India,
Your talent and determination through the World Cup was noteworthy. You’ve played with great spirit and brought immense pride to the nation.
We stand with you today and always.
— Narendra Modi (@narendramodi) November 19, 2023



Pinco-da uduşlar tez ödənilir. Ən son bonuslar və kampaniyalar üçün pinco azerbaycan səhifəsinə bax. Pinco casino giriş sürətlidir.
Pinco oyunçuları üçün xoş təcrübə yaradır.