ಶಿವಮೊಗ್ಗ : ಅತಿಯಾಗಿ ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕ್ಯಾಂಟರ್ ಚಲಾಯಿಸುತ್ತಿದ್ದ ಚಾಲಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅತಿಯಾದ ಮದ್ಯ ಸೇವಿಸಿದ್ದ ಶಿವಮೊಗ್ಗದ ಇರ್ಫಾನ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಿರಾಳಕೊಪ್ಪ ಬಸ್ ನಿಲ್ದಾಣ ವೃತ್ತ, ಉಡುಗಣಿ ರಸ್ತೆಯಲ್ಲಿ ಸಾರ್ವಜನಿಕರು ಭಯ ಪಡುವ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದನು. ಇದನ್ನು ಕಂಡು ಸಾರ್ವಜನಿಕರೇ ವಾಹನವನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಸ್ಥಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ತಪ್ಪಿದ ಭಾರಿ ಅನಾಹುತ
ಜನ ನಿಬಿಡ ಪ್ರದೇಶದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿರುವ ಘಟನೆ ಕೊಪ್ಪಳ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹುಲಿಗಿ ದೇವಸ್ಥಾನದ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.
ಹುಲಿಗಿ ದೇವಸ್ಥಾನದ ವೈಕಲ್ ಪಾರ್ಕಿಂಗ್ ಬಳಿ ವಿದ್ಯುತ್ ತಂತಿ ಹರಿದು ಬಿದ್ದಿದೆ. ಮಂಗಳವಾರ ಹಿನ್ನಲೆ ಸಹಸ್ರ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಅಮ್ಮನ ಪಾವಡದಿಂದಲೇ ಭಾರಿ ಅನಾಹುತ ತಪ್ಪಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಕೂಡಲೇ ಸ್ಥಳೀಯತು ಲೈನ್ ಮ್ಯಾನ್ಗೆ ಕರೆ ಮಾಡಿ ವಿದ್ಯುತ್ ತೆಗೆಸಿದ್ದಾರೆ.



Thanks for sharing your thoughts. I truly appreciate your efforts and I will be waiting for your next post thanks once again.
Brasilia prostitution