Tuesday, August 26, 2025
Google search engine
HomeUncategorizedಸರಿಯಾಗಿ ನೋಡಿ.. ಇವರು ಡುಪ್ಲಿಕೇಟ್ ರಜನಿಕಾಂತ್..!

ಸರಿಯಾಗಿ ನೋಡಿ.. ಇವರು ಡುಪ್ಲಿಕೇಟ್ ರಜನಿಕಾಂತ್..!

ಬೆಂಗಳೂರು : ಜಗತ್ತಿನಲ್ಲಿ ಒಂದೇ ರೀತಿಯ ಏಳು ಜನ ಇರುತ್ತಾರೆ ಎಂಬ ಮಾತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದೇ ಒಂದು ವಿಡಿಯೋ ವೈರಲ್​ ಆಗಿ ಅಚ್ಚರಿ ಮೂಡಿಸಿದೆ.

ಆ ವಿಡಿಯೋದಲ್ಲಿ ಸೇಮ್ ಟು ಸೇಮ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಂತೆಯೇ ಕಾಣುವ ಮತ್ತೋರ್ವ ವ್ಯಕ್ತಿ ಟ್ರೆಂಡಿಂಗ್ ಆಗಿದ್ದಾರೆ. ಈ ವಿಡಿಯೋ ನೋಡಿದ ಸೂಪರ್​ ಸ್ಟಾರ್ ರಜನಿಕಾಂತ್​ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ತೆರೆ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಬಳಿಕ ರಜನಿಕಾಂತ್ ನಟನೆಯ ಜೈಲರ್​ ಸಿನಿಮಾ ತೆರೆ ಮೇಲೆ ಬಂತು ಸೂಪರ್ ಹಿಟ್ ಆಗಿದೆ. ಇದರಿಂದ ಸೂಪರ್​ ಸ್ಟಾರ್​ ಅಭಿಮಾನಿಗಳು ಇನ್ನೂ ಜೈಲರ್ ಗುಂಗಿನಿಂದ ಹೊರಗೆ ಬಂದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬಂದಿದೆ.

ವೈರಲ್​ ಆದ ವಿಡಿಯೋದಲ್ಲಿ ನಟ ರಜನಿಕಾಂತ್‌ ಅವರಂತೆ ಹೋಲುವ ವ್ಯಕ್ತಿಯೊಬ್ಬ ಶಾರ್ಟ್ಸ್ ಧರಿಸಿಕೊಂಡಿದ್ದಾನೆ. ಆದರೆ ಅದು ನಟ ರಜನಿಕಾಂತ್‌ ಅಲ್ಲ ಅನ್ನೋದು ಬಯಲಾಗಿದೆ. ಅದು ಫೇಕ್ ವೀಡಿಯೋ ಆಗಿದ್ದು ರಜಿನಿಕಾಂತ್ ಅವರಂತೆ ಕಾಣೋ ಯಾರೋ ಸಾಮಾನ್ಯ ವ್ಯಕ್ತಿಯಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments