ಬಿರಿಯಾನಿ ಹೋಟೆಲ್ ಮೇಲೆ ಐಟಿ ದಾಳಿ : 1.47 ಕೋಟಿ ವಶ

ಬೆಂಗಳೂರು : ಸಿಲಿಕಾನ್ ಸಿಟಿಯ ಹೊರವಲಯದಲ್ಲಿರುವ ಚೆನೈ ಮತ್ತು ಬೆಂಗಳೂರು ಹೈವೇನಲ್ಲಿರುವ ಹೊಸಕೋಟೆ ಸಮೀಪ ತಲೆ ಎತ್ತಿರುವ ಬಿರಿಯಾನಿ ಸೆಂಟರ್ ಗಳು ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿವೆ. ಬೆಳ್ಳಂ ಬೆಳಿಗ್ಗೆ ದಿನನಿತ್ಯ ಬಿರಿಯಾನಿ ಸವಿಯಲು ಸಾವಿರಾರು ಮಂದಿ ಸಿಲಿಕಾನ್ ಸಿಟಿಯಿಂದ ಇಲ್ಲಿಗೆ ದೌಡಾಯಿಸುತ್ತಾರೆ.

ಇನ್ನೂ ದಿನದಿಂದ ದಿನಕ್ಕೆ ಹೊಸಕೋಟೆ ನಗರದ ಸುತ್ತಮುತ್ತ ನಾಯಿಕೊಡೆಗಳಂತೆ ಉತ್ಪತ್ತಿ ಆಗುತ್ತಿವೆ. ಇನ್ನೂ ಕೆಲವೊಂದು ಬಿರಿಯಾನಿ ಸೆಂಟರ್ ಗಳಿಗೆ ಒಂದೊಂದು ದಿನಕ್ಕೆ ಲಕ್ಷಾಂತರ ರೂಪಾಯಿ ವ್ಯಾಪರ ಆಗುತ್ತದೆ. ಈ ಹಿನ್ನೆಲೆಯಲ್ಲಿ 10 ರಿಂದ 15 ತಂಡದ ಜಿಎಸ್ ಟಿ ಅಧಿಕಾರಿಗಳು ಏಳೆಂಟು ಬಿರಿಯಾನಿ ಸೆಂಟರ್ ಗಳ ಮೇಲೆ ದಾಳಿ ನಡೆಸಿದ್ದಾರೆ.

ಕಾನೂನು ಬಾಹಿರವಾಗಿ ವ್ಯಾಪಾರ ಮತ್ತು ಆದಾಯ ಸಂಪಾದನೆ ಮಾಡುತ್ತಿರುವ ಆರೋಪದ ಮೇಲೆ ದಾಳಿ ನಡೆಸಿರುವ ಜಿಎಸ್​ಟಿ ಅಧಿಕಾರಿಗಳು ಸಾಕಷ್ಟು ಪ್ರಯಾಣ ದಾಖಲೆಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

1 ಕೋಟಿ 47 ಲಕ್ಷ ವಶ

ಇನ್ನೂ ರಾಜ್ ಧಮ್ ಬಿರಿಯಾನಿ ಸೆಂಟರ್ ಮೇಲೆ ಮತ್ತು ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1 ಕೋಟಿ 47 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ ಧಮ್ ಬಿರಿಯಾನಿ ಸೇರಿದಂತೆ ಉಳಿದ ಬಿರಿಯಾನಿ ಸೆಂಟರ್ ಗಳಿಗೆ ಸದ್ಯಕ್ಕೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES