ಮಹಿಷಾ ಟೆರರಿಸ್ಟಾ? ಬಿಜೆಪಿಗೆ ಏನು ಸಮಸ್ಯೆ ಮಾಡಿದ್ದ? : ಎಂ. ಲಕ್ಷ್ಮಣ್

ಮೈಸೂರು : ನಿಮ್ಮ ಸರ್ಕಾರ ಇದ್ದಾಗ ಮಹಿಷಾ ಪ್ರತಿಮೆ ತೆಗೆಸಬೇಕಾಗಿತ್ತು. ಮಹಿಷಾ ಟೆರರಿಸ್ಟಾ? ಮಹಿಷಾ ಪ್ರತಾಪ್ ಸಿಂಹ ಪ್ಯಾಮಿಲಿಗೆ, ಬಿಜೆಪಿಗೆ ಏನು ಸಮಸ್ಯೆ ಮಾಡಿದ್ರು? ಮಹಿಷಾ ಒಬ್ಬ ರಾಜನಾಗಿದ್ದ, ಈಗ ಯಾಕೆ ಗೊಂದಲ ಸೃಷ್ಟಿ ಮಾಡ್ತಿದ್ದೀರಿ? ಎಂದು ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾಕ್ಕೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ಲಾನ್ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಸಾಯಿಸುತ್ತಾರೆ. ನಿಮ್ಮ ಮಕ್ಕಳಿಗೆ ಚುಚ್ಚಿಸಿ ಇನ್ನೊಬ್ಬರ ಮೇಲೆ ಹಾಕುವ ಪ್ಲಾನ್ ಮಾಡ್ತಾರೆ. ಇದರಿಂದ ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ ಎಂದು ಮನವಿ ಮಾಡಿದರು.

ಪ್ರತಾಪ್ ಸಿಂಹ ದಲಿತ ವಿರೋಧಿ. ಪ್ರತಾಪ್ ಸಿಂಹ ಡೊಂಗಿ ರಾಜಕಾರಣಿ. ಕಿಡಿ ಹತ್ತಿಸುವ ಕೆಲಸ ಮಾಡುವ ರಾಜಕಾರಣಿ. 2015 ರಿಂದ ಮಹಿಷಾ ದಸರಾ ಶಾಂತಿಯುತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಹೇಳಿಕೆ‌ ಕೊಟ್ಟರು ಯಾಕೆ ಪೊಲೀಸರು ಪ್ರತಾಪ್ ಸಿಂಹ ಅರೆಸ್ಟ್ ಮಾಡ್ತಿಲ್ಲ. ಇಬ್ಬರ ಕೊಲೆ ಮಾಡಿಸುವ ಪ್ಲಾನ್ ಮಾಡಿದ್ದಾರೆ. ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ. ಕೊಲೆ ಮಾಡಿಸಿ ಗಲಭೆ ಎಬ್ಬಿಸಿ ದಸರಾ ನಿಲ್ಲಿಸುವ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮಹಿಷಾ ಪೂಜೆ ಮಾಡಿದ್ರೆ ಸಮಸ್ಯೆ ಏನು?

ಲೋಕಸಭಾ ಚುನಾವಣೆ ಬರುತ್ತಿದೆ, ಪ್ರತಾಪ್ ಸಿಂಹ ಕ್ಷೇತ್ರಕ್ಕೆ ಮಾಡಿರುವ ಕೆಲಸ ಶೂನ್ಯ. ಈಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದೀರಿ. ಮೈಸೂರಿಗೆ 400 ಆರ್.ಎಸ್.ಎಸ್ ಕಾರ್ಯಕರ್ತರು ವಿವಿಧ ರಾಜ್ಯದಿಂದ ಬಂದಿದ್ದಾರೆ. ಬೇರೆ ಕಡೆಯಿಂದ ಯಾಕೆ ಮೈಸೂರಿಗೆ ಕರೆದುಕೊಂಡು ಬಂದಿದ್ದು ಯಾಕೆ? ಮಹಿಷಾ ಪೂಜೆ ಮಾಡಬೇಡ ಅಂತ ಹೇಳಲು ನಿನ್ಯಾರು? ಹಿಂದುಳಿದ ದಲಿತ ಸಮುದಾಯದವರು ಮಹಿಷಾ ಪೂಜೆ ಮಾಡಿದರೆ ನಿಮ್ಮ ಸಮಸ್ಯೆ ಏನು? ಚಾಮುಂಡೇಶ್ವರಿ ವಿರುದ್ಧ ಏನಾದರೂ ಮಾಡಿದ್ರೆ ಹೇಳಿ. ಆಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES